ಧೋನಿಗೆ ಚೆನ್ನೈ ಪರ ಕೊನೆಯ ಪಂದ್ಯ? – #DefinitelyNot ಟ್ರೆಂಡಿಂಗ್

ಮುಂಬೈ: 4 ಬಾರಿ ಐಪಿಎಲ್ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಇಂದು 2022ರ ಐಪಿಎಲ್‍ನ ಕೊನೆಯ ಲೀಗ್ ಪಂದ್ಯವನ್ನು ಆಡುತ್ತಿದೆ. ಈ ನಡುವೆ ಇದು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೂ ಕೊನೆಯ ಪಂದ್ಯ ಎಂಬ ಮಾತು ಕೇಳಿ ಬರುತ್ತಿದೆ.

ರಾಜಸ್ಥಾನ ವಿರುದ್ಧ ಕೊನೆಯ ಲೀಗ್ ಪಂದ್ಯವಾಡುತ್ತಿರುವ ಚೆನ್ನೈ ತಂಡದೊಂದಿಗೆ ನಾಯಕ ಧೋನಿಗೂ ಇದು ಕೊನೆಯ ಪಂದ್ಯ ಎಂಬ ಮಾತುಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ #DefinitelyNot ಎಂಬ ಪದ ಟ್ರೆಂಡಿಂಗ್ ಆಗಿದೆ. ಹೌದು ಧೋನಿ ಟೀಂ ಇಂಡಿಯಾಗೆ ಗುಡ್ ಬೈ ಹೇಳಿದ ಬಳಿಕ ಐಪಿಎಲ್‍ನಲ್ಲಿ ಚೆನ್ನೈ ಪರ ಆಡುತ್ತಿದ್ದಾರೆ. ಇದೀಗ ಧೋನಿಗೆ 41 ವರ್ಷ ಹಾಗಾಗಿ ಮುಂದಿನ ಐಪಿಎಲ್‍ನಲ್ಲಿ ಧೋನಿ ಚೆನ್ನೈ ಪರ ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದಂತೆ ಧೋನಿ ಅಭಿಮಾನಿಗಳು #DefinitelyNot ಧೋನಿ ಮುಂದಿನ ವರ್ಷ ಚೆನ್ನೈ ಪರ ಆಡಲಿ ಎಂಬ ಕೋರಿಕೆ ಹೆಚ್ಚಾಗಿದೆ. ಇದನ್ನೂ ಓದಿ: Thailand Open – ನಂ.1 ಆಟಗಾರ್ತಿ ಯಮಗುಚಿಯನ್ನು ಸೋಲಿಸಿ ಸೆಮಿಗೆ ಸಿಂಧು ಎಂಟ್ರಿ

MS DHONI (2)

2021ರ ಐಪಿಎಲ್‍ನಲ್ಲಿ ಚಾಂಪಿಯನ್ ಆಗಿದ್ದ ಚೆನ್ನೈ ತಂಡ ಈ ಬಾರಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿ ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದೆ. ಈ ನಡುವೆ ನಾಯಕತ್ವದ ಬದಲಾವಣೆ, ಗಾಯಳುಗಳ ಸಮಸ್ಯೆ ತಂಡಕ್ಕೆ ಹೊಡೆತ ನೀಡಿದೆ. ಇದೀಗ ಕೊನೆಯ ಲೀಗ್ ಪಂದ್ಯವಾಡುತ್ತಿರುವ ಚೆನ್ನೈ ತಂಡದೊಂದಿಗೆ ಧೋನಿಗೂ ಕೊನೆಯ ಪಂದ್ಯವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

ಈ ನಡುವೆ ಈ ಹಿಂದಿನ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರ ಡ್ಯಾನಿ ಮಾರಿಸನ್, ಧೋನಿ ನೀವು ಮುಂದಿನ ಬಾರಿ ಐಪಿಎಲ್‍ನಲ್ಲಿ ಹಳದಿ ಜೆರ್ಸಿಯಲ್ಲಿ ಕಾಣಿಸುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಧೋನಿ ಖಂಡಿತ ನಾನು ಮುಂದಿನ ಬಾರಿಯೂ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಖಂಡಿತವಾಗಿಯೂ ನನ್ನನ್ನು ಹಳದಿ ಜೆರ್ಸಿಯಲ್ಲಿ ನೋಡಲಿದ್ದೀರಿ. ಆದರೆ ಈ ಹಳದಿ ಜೆರ್ಸಿಯಲ್ಲೋ ಅಥವಾ ಬೇರೆ ಹಳದಿ ಜೆರ್ಸಿಯಲ್ಲೋ ಗೊತ್ತಿಲ್ಲ ಎಂದು ದ್ವಂದ್ವ ಹೇಳಿಕೆ ನೀಡಿದರು. ಈ ಹೇಳಿಕೆಯ ಬಳಿಕ ಇದೀಗ ಮುಂದಿನ ಐಪಿಎಲ್‍ನಲ್ಲಿ ಧೋನಿ ಹೊಸ ರೋಲ್‍ನಲ್ಲಿ ತಂಡದಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಮಾಜಿ ಆಟಗಾರರಿಂದ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೆಲ್ಲ ಸ್ವತಃ ಧೋನಿ ಮುಂದಿನ ಬಾರಿ ಚೆನ್ನೈ ತಂಡದಲ್ಲಿ ನಾಯಕನಾಗಿ ಇರುತ್ತೇನೆ ಎಂದು ಟಾಸ್‌ ವೇಳೆ ತಿಳಿಸಿದ್ದಾರೆ. ಆದರೂ ಅಭಿಮಾನಿಗಳಲ್ಲಿ ಧೋನಿಯ ನಿರ್ಧಾರದ ಬಗ್ಗೆ ಅನುಮಾನಗಳಿವೆ. ಈ ಅನುಮಾನಗಳಿಗೆ ಮುಂದಿನ ದಿನಗಳಲ್ಲಿ ಧೋನಿ ಉತ್ತರಿಸುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *