ಡಿಆರ್‌ಎಸ್‌ಗೆ ಪವರ್ ಕಟ್ ಕಾಟ – ಟ್ರೋಲಾದ ಶ್ರೀಮಂತ ಕ್ರಿಕೆಟ್ ಲೀಗ್

ಮುಂಬೈ: ಗುರುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೆ ವಿದ್ಯುತ್ ಸಮಸ್ಯೆ ಎದುರಾಗಿತ್ತು.

ಐಪಿಎಲ್ 2022ರ 59 ನೇ ಪಂದ್ಯದಲ್ಲಿ ಚೆನ್ನೈ ಮತ್ತು ಮುಂಬೈ ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ವಿದ್ಯುತ್ ಕಡಿತದಿಂದಾಗಿ ಮೊದಲ ಇನಿಂಗ್ಸ್‌ನ ಮೊದಲ ಎರಡು ಓವರ್‌ಗಳಿಗೆ ಡಿಆರ್‌ಎಸ್ ಇರಲಿಲ್ಲ. ಕ್ರೀಡಾಂಗಣದಲ್ಲಿ ವಿದ್ಯುತ್ ಸಮಸ್ಯೆಯಿಂದ ಟಾಸ್ ಕೂಡ ವಿಳಂಬವಾಯಿತು.

ಇದರಿಂದಾಗಿ ಪಂದ್ಯದಲ್ಲಿ ಮೊದಲ 10 ಎಸೆತಗಳಲ್ಲಿ ಡಿಆರ್‌ಎಸ್ ತಂತ್ರಜ್ಞಾನ ಬಳಕೆಗೆ ಲಭ್ಯವಾಗಿರಲಿಲ್ಲ. ಅಲ್ಲದೆ ಸಿಎಸ್‍ಕೆ ಆರಂಭಿಕ ಬ್ಯಾಟ್ಸ್‌ಮ್ಯಾನ ಡೆವೊನ್ ಕಾನ್ವೆ ವಿವಾದಾತ್ಮಕ ತೀರ್ಪಿಗೆ ಔಟ್ ಆಗಿದ್ದರು. ಇದು ಚೆನ್ನೈ ತಂಡದ ಹಿನ್ನಡೆಗೆ ಕಾರಣವಾಯಿತು.

ವಿದ್ಯುತ ಕಂಬದ ಟವರ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಟಾಸ್ ಎರಡು ನಿಮಿಷಗಳಷ್ಟು ವಿಳಂಬವಾಗಿತ್ತು. ನಂತರದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಮುಂಬೈ ತಂಡದ ಪ್ರಮುಖ ಬೌಲರ್ ಡ್ಯಾನಿಯಲ್ ಸ್ಯಾಮ್ಸ್ ಎಸೆದ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲೇ ಕಾನ್ವೆ  ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು. ಈ ವೇಳೆ ಮುಂಬೈ ತಂಡದ ಮನವಿ ಪುರಸ್ಕರಿಸಿದ ಅಂಪೈರ್ ಔಟ್ ತೀರ್ಪು ನೀಡಿದರು. ಆದರೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಡಿಆರ್‌ಎಸ್ ತಂತ್ರಜ್ಞಾನದ ಅಲಭ್ಯತೆ ಕಾಡಿದ್ದರಿಂದ ಕಾನ್ವೆಗೆ ರೀವ್ಯೂ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಪೆವಿಲಿಯನ್‍ನತ್ತ ಹೆಜ್ಜೆ ಹಾಕಬೇಕಾಯಿತು. ಆದರೆ ನಿಜಕ್ಕೂ ಇದು ಔಟ್ ಆಗಿತ್ತೆ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡಿದೆ.

ಈ ಕುರಿತು ಅಭಿಮಾನಿಗಳು ಟ್ವಿಟರ್‍ನಲ್ಲಿ ಮಿಶ್ರ ಪ್ರತಿಕ್ರಿಯಿ ನೀಡಿದ್ದು, ವಿಶ್ವದ ಶ್ರೀಮಂತ ಲೀಗ್‍ನಲ್ಲಿ ವಿದ್ಯುತ್ ಅಡಚಣೆ ಉಂಟಾಗಿರುವುದು ಸಿಕ್ಕಾಪಟ್ಟೆ ಟ್ರೋಲ್‍ಗೆ ಗುರಿಯಾಗಿದೆ.

Comments

Leave a Reply

Your email address will not be published. Required fields are marked *