ಪೊಲಾರ್ಡ್, ಹಾರ್ದಿಕ್ ಅಬ್ಬರಕ್ಕೆ ಪಂಜಾಬ್ ಪಂಚರ್ – ಮುಂಬೈಗೆ 6 ವಿಕೆಟ್ ಜಯ

ಅಬುಧಾಬಿ: ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಯುಎಇನಲ್ಲಿ ಗೆಲುವಿನ ಖಾತೆ ತೆರೆದಿದೆ.

ಪಂಜಾಬ್ ನೀಡಿದ್ದ 136 ರನ್‍ಗಳ ಗುರಿಯನ್ನು ಬೆನ್ನತ್ತಿದ ಮುಂಬೈ, ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್‍ನಿಂದಾಗಿ 19 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ. ಇದನ್ನೂ ಓದಿ: ಡೆಲ್ಲಿ ಮಣಿಸಿದ ಕೋಲ್ಕತ್ತಾ – 3 ವಿಕೆಟ್‍ಗಳ ಜಯ

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಮುಂಬೈ ದಾಳಿಯ ವಿರುದ್ಧ ರನ್‍ಗಳಿಸಲು ತಿಣುಕಾಡಿತು. ಆರಂಭಿಕರಾದ ನಾಯಕ ಕೆಎಲ್ ರಾಹುಲ್ ಹಾಗೂ ಮಂದೀಪ್ ಸಿಂಗ್ ಉತ್ತಮ ಮೊತ್ತ ಪೇರಿಸುವ ಲಕ್ಷಣ ತೋರಿಸಿದರು. ಮೊದಲ ವಿಕೆಟ್‍ಗೆ ಈ ಜೋಡಿ 5.2 ಓವರ್‍ಗಳಿಗೆ 36 ರನ್ ಕಲೆ ಹಾಕಿತು. ದೊಡ್ಡ ಇನ್ನಿಂಗ್ಸ್ ಮುನ್ಸೂಚನೆ ನೀಡಿದ್ದ ರಾಹುಲ್, ಪೊರ್ಲಾಡ್‍ಗೆ ವಿಕೆಟ್ ನೀಡಿ ಹೊರ ನಡೆದರು. ಇದರ ಬೆನ್ನಲ್ಲೇ ಗೇಲ್ ಹಾಗೂ ಮಂದೀಪ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೆಡ್ ನಡೆಸಿದರು.

ಪಂಜಾಬ್ ಪರ ರಾಹುಲ್ 21 ರನ್ (22 ಎಸೆತ 2 ಬೌಂಡರಿ) ಗಳಿಸಿದರು. ಮಂದೀಪ್ ಸಿಂಗ್ 15ರನ್ (14 ಎಸೆತ 2 ಬೌಂಡರಿ) ಗಳಿಸಿದರೆ, ಮಾಕ್ರ್ರಮ್ 42 ರನ್ (29 ಎಸೆತ 6 ಬೌಂಡರಿ) ಸಿಡಿಸಿದರು. ಉಳಿದಂತೆ ದೀಪಕ್ ಹೂಡ 28ರನ್ (26 ಎಸೆತ 1 ಬೌಂಡರಿ 1 ಸಿಕ್ಸರ್) ಹೊಡೆದರು. ನಿಗದಿತ 20 ಓವರ್‍ನಲ್ಲಿ ಪಂಜಾಬ್ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಮುಂಬೈ ಪರ ಪೊರ್ಲಾಡ್ ಹಾಗೂ ಬುಮ್ರಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ

136 ರನ್‍ಗಳ ಗುರಿ ಬೆನ್ನತ್ತಿದ ಮುಂಬೈಗೆ ಆರಂಭಿಕ ಆಘಾತ ಎದುರಾಯಿತು. ನಾಯಕ ರೋಹಿತ್ ಶರ್ಮಾ 8, ಸೂರ್ಯ ಕುಮಾರ್ ಯಾದವ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ವಿಕೆಟ್ ಕೀಪರ್ ಡಿ ಕಾಕ್ 38 ರನ್ (32 ಎಸೆತ 3 ಬೌಂಡರಿ) ಗಳಿಸಿ ತಂಡಕ್ಕೆ ರನ್ ಗಳಿಸಲು ಕೊಂಚ ನೆರವಾದರು. ಮಿಡಲ್ ಆರ್ಡರ್ ಆಡಲು ಬಂದ ಸೌರಭ್ ತಿವಾರಿ 45 ರನ್ ( 37 ಎಸೆತ 3 ಬೌಂಡರಿ 2 ಸಿಕ್ಸರ್) ಚಚ್ಚುವ ಮೂಲಕ ಮುಂಬೈ ತಂಡಕ್ಕೆ ಆಸರೆಯಾದರು. ಸೌರಭ್ ತಿವಾರಿ ವಿಕೆಟ್ ಪತನದ ಬಳಿಕ ಕ್ರಿಸ್‍ಗಿಳಿದ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ, ಪಂಜಾಬ್ ಬೌಲರ್‍ಗಳನ್ನು ಚಂಡಾಡಿ, ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಐದನೇ ಹಾಗೂ ಯುಎಇಯಲ್ಲಿ ಮೊದಲ ಜಯ ದಾಖಲಿಸಿತು.

 

Comments

Leave a Reply

Your email address will not be published. Required fields are marked *