ಕೊರೊನಾ ಎಫೆಕ್ಟ್-ಮಹಾರಾಷ್ಟ್ರದಲ್ಲಿ ಐಪಿಎಲ್ ಟಿಕೆಟ್ ಮಾರಾಟ ನಿಷೇಧ

-ಖಾಲಿ ಸ್ಟೇಡಿಯಂನಲ್ಲಿ ಪಂದ್ಯ

ಮುಂಬೈ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಮುಂಬೈನಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ಟಿಕೆಟ್ ಮಾರಾಟ ನಿಷೇಧಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಟಿಕೆಟ್ ನಿಷೇಧದಿಂದಾಗಿ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಐಪಿಎಲ್ ಪಂದ್ಯಗಳಿಗೆ ಅನುಮತಿ ನೀಡಿರುವ ಸರ್ಕಾರ ಟಿಕೆಟ್ ಮಾರಾಟದ ಮೇಲೆ ನಿಷೇಧ ಹಾಕಿದೆ. ಈ ಕುರಿತು ಮಹಾರಾಷ್ಟ್ರ ಸರ್ಕಾರ ಬಿಸಿಸಿಐ ಜೊತೆ ಮಾತುಕತೆ ಸಹ ನಡೆಸಿದೆ.

ಮಹಾರಾಷ್ಟ್ರ ಸರ್ಕಾರ ಮತ್ತು ಬಿಸಿಸಿಐ ಮಾತುಕತೆ ಯಶಸ್ವಿಯಾಗಿದೆ. ಟಿಕೆಟ್ ನಿಂದಾಗುವ ನಷ್ಟವನ್ನು ಬೇರೆ ಮೂಲಗಳಿಂದ ಸಂಗ್ರಹಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ನೇರಪ್ರಸಾರ, ಜಾಹೀರಾತು, ವೆಬ್‍ಸೈಟ್ ಹೀಗೆ ಇನ್ನುಳಿದ ಮೂಲಗಳ ಮೂಲಕ ಬಿಸಿಸಿಐ ನಷ್ಟ ಭರಿಸಿಕೊಳ್ಳಲು ಚಿಂತನೆ ನಡೆಸಿದೆ. ಮಾರ್ಚ್ 29ರಿಂದ ಐಪಿಎಲ್ ಸರಣಿ ಆರಂಭವಾಗಲಿದೆ. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ 13 ರೂಲ್ಸ್

ಏಪ್ರಿಲ್ 15ರವರೆಗೆ ವಿದೇಶಿ ಪ್ರವಾಸಿಗರಿಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದುವರೆಗೂ ನೀಡಲಾಗಿರುವ ವೀಸಾಗಳನ್ನ ರದ್ದುಗೊಳಿಸುವಂತೆ ಆದೇಶಿಸಲಾಗಿದೆ. ದಕ್ಷಿಣ ಕೊರಿಯಾ, ಇಟಲಿಗೆ ಏರ್ ಇಂಡಿಯಾ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಅಮೆರಿಕಕ್ಕೆ ಯುರೋಪ್(ಬ್ರಿಟನ್ ಹೊರತುಪಡಿಸಿ) ನಾಗರಿಕರು ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿದೆ.

Comments

Leave a Reply

Your email address will not be published. Required fields are marked *