‘ಆರ್‌ಸಿಬಿಯನ್ನ ಬೈದರೆ ಕೊಲೆ ಆಗ್ತಿಯಾ’ – ವಿವರಣೆಗಾರನ ವಿರುದ್ಧ ಅಭಿಮಾನಿ ಗರಂ

ಬೆಂಗಳೂರು: 2019 ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಒಂದು ಗೆಲುವುವನ್ನ ಪಡೆದಿಲ್ಲ. ಇದೇ ವೇಳೆ ತಂಡದ ವಿರುದ್ಧ ಕಮೆಂಟ್ ಮಾಡಿದ್ದ ನ್ಯೂಜಿಲೆಂಡಿನ ವೀಕ್ಷಕ ವಿವರಣೆಗಾರ ಸೈಮನ್ ಡೌಲ್‍ಗೆ ಅಭಿಮಾನಿಯೊಬ್ಬರು ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆರ್ ಸಿಬಿ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಈಗಾಗಲೇ ಸಾಕಷ್ಟು ಬೇಸರಗೊಂಡಿದ್ದು, ಕೆಲವರು ಇದರಿಂದ ತಂಡದ ವಿರುದ್ಧ ಅಸಮಾಧಾನ ಹೊರಹಾಕಿ ನಾಯಕತ್ವದ ಬದಲಾವಣೆ ಮಾತನಾಡಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಮಾತ್ರ ತಂಡದ ಬಗ್ಗೆ ಕಮೆಂಟ್ ಮಾಡಿದರೆ ಕೊಲೆ ಮಾಡುವುದಾಗಿ ಸೈಮಲ್ ಡೌಲ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾನೆ.

ಅಭಿಮಾನಿಯ ಈ ಹೇಳಿಕೆಗೆ ಸೈಮನ್ ಪ್ರತಿಕ್ರಿಯೆ ನೀಡಿದ್ದು, ಅಭಿಮಾನಿಯ ಈ ಸಂದೇಶದ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದಾರೆ. ಕೊಲೆ ಬೆದರಿಕೆ ಬರುವಂತೆ ನಾನು ಏನು ಹೇಳಿದ್ದೇನೆ ಎಂಬುವುದರ ಬಗ್ಗೆ ಅರಿವಿಲ್ಲ. ಆದರೆ ಇದು ಕೇವಲ ಕ್ರೀಡೆಯಷ್ಟೇ ಎಂದು ತಿಳಿಸಿ ಸಮಾಧಾನಗೊಳ್ಳುವಂತೆ ಬರೆದುಕೊಂಡಿದ್ದಾರೆ. ಆದರೆ ಈ ಟ್ವೀಟ್ ವೈರಲ್ ಆಗುತ್ತಿದಂತೆ ಡಿಲೀಟ್ ಮಾಡಿದ್ದಾರೆ.

ಆರ್ ಸಿಬಿ ತಂಡದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ಹಾಗೂ ಟ್ರೋಲ್ ಗಳನ್ನು ಸಹಿಸದ  ಅಭಿಮಾನಿಯೊಬ್ಬರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *