ಐಪಿಎಲ್ 2019: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್‍ಗೆ 12 ಲಕ್ಷ ರೂ. ದಂಡ

ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲುಂಡಿದ್ದು, ಇದರ ಬೆನ್ನಲ್ಲೇ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾಗೆ ಬರೋಬ್ಬರಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮೂರು ಬಾರಿ ಟೈಟಲ್ ಚಾಂಪಿಯನ್ ಆಗಿರುವ ತಂಡದ ನಾಯಕನಾಗಿರುವ ರೋಹಿತ್, ಪಂಜಾಬ್ ವಿರುದ್ಧ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ನಡೆಸಿದ್ದರು. ಪರಿಣಾಮ ಮ್ಯಾಚ್ ರೆಫ್ರಿ ದಂಡ ವಿಧಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಮೊದಲ ಬಾರಿಗೆ ದಂಡ ಪಡೆಯುತ್ತಿರುವ ಕುಖ್ಯಾತಿಯನ್ನು ಕೂಡ ಮುಂಬೈ ತಂಡ ಪಡೆಯಿತು. ಈ ಕುರಿತು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.

ಇತ್ತ ಪಂದ್ಯದಲ್ಲಿ ಕೆಎಲ್ ರಾಹುಲ್, ಮಯಾಂಕ್ ಭರ್ಜರಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಮುಂಬೈ ಇಂಡಿಯನ್ಸ್ ನೀಡಿದ 177 ರನ್ ಗಳ ಸವಾಲಿನ ಗುರಿಯನ್ನು ಪಂಜಾಬ್ ಸುಲಭವಾಗಿ ಬೆನ್ನತ್ತಿ 18.4 ಓವರ್ ಗಳಲ್ಲಿ ಗೆಲುವು ಪಡೆಯಿತು. ಪಂಜಾಬ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಎಲ್ ರಾಹುಲ್ 6ಬೌಂಡರಿ, ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಸಿಡಿಸಿದರು. ಇತ್ತ ಮಯಾಂಕ್ ಕೂಡ 43 ರನ್ ಗಳಿಸಿ ಗಮನ ಸೆಳೆದರು.

ರೋಹಿತ್ ಬ್ಯಾಟಿಂಗ್: ಪಂದ್ಯದಲ್ಲಿ ಮುಂಬೈ ತಂಡ ಸೋಲುಂಡರೂ ಕೂಡ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ನಿಂದ ಗಮನ ಸೆಳೆದರು. 5 ಬೌಂಡರಿ ಸಿಡಿಸಿದ ರೋಹಿತ್ 18 ಎಸೆತಗಳಲ್ಲಿ 32 ರನ್ ಗಳಿಸಿ ಎಲ್‍ಬಿ ಬಲೆಗೆ ಬಿದ್ದರು. ಆದರೆ ಅಂಪೈರ್ ಎಲ್‍ಬಿ ಔಟ್ ನೀಡಿದ್ದರು ಕೂಡ ರಿವ್ಯೂನಲ್ಲಿ ಅದು ನಾಟೌಟ್ ಆಗಿತ್ತು. ಇದಕ್ಕೂ ಮುನ್ನ ರಿವ್ಯೂ ಪಡೆಯುವ ಅವಕಾಶ ಇದ್ದರು ಕೂಡ ರೋಹಿತ್ ಅವಕಾಶ ಬಳಸಿಕೊಳ್ಳದೇ ಪೆವಿಲಿಯನತ್ತ ತೆರಳಿದ್ದರು.

https://twitter.com/Duchess_Of_Swag/status/1111947962278531072

Comments

Leave a Reply

Your email address will not be published. Required fields are marked *