ಐಪಿಎಲ್ ಗೊಂದಲ: ಧೋನಿ ಚೆನ್ನೈ ತಂಡದಲ್ಲಿ ಆಡೋದು ಡೌಟ್!

ಮುಂಬೈ: ಫೆಬ್ರವರಿಯಲ್ಲಿ ನಡೆಯಲಿರುವ ಐಪಿಎಲ್ 11ನೇ ಆವೃತ್ತಿಯ ಹರಾಜು ಪ್ರಕ್ರಿಯೆಯನ್ನು ಇಂಗ್ಲೆಂಡ್‍ನಲ್ಲಿ ನಡೆಸಲು ಎರಡು ತಂಡಗಳ ಮಾಲೀಕರು ಮನವಿ ಮಾಡಿದ್ದಾರೆ. ಆದರೆ ಉಳಿದ ಫ್ರಾಂಚೈಸಿಗಳು ಇದಕ್ಕೆ ಸಮ್ಮತಿ ಸೂಚಿಸದ ಕಾರಣ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ.

ಐಪಿಎಲ್ 11ನೇ ಆವೃತ್ತಿಗೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆ ಮುಂಬೈನಲ್ಲಿ ನಡೆಯಿತು. ಇದೇ ವೇಳೆ ತಂಡದಲ್ಲಿ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವ `ರಿಟೇನ್’ ಪದ್ಧತಿಯನ್ನು ಕೈ ಬಿಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಆಗ್ರಹಿಸಿವೆ.

ಮೂಲಗಳ ಪ್ರಕಾರ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 5 ರಿಂದ 6 ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಫಾಪ್ ಡುಪ್ಲೆಸ್ಸಿ, ಹಾಗೂ ಡ್ವೈನ್ ಬ್ರಾವೋರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪ್ಲಾನ್ ಮಾಡಿದೆ. ಇದಕ್ಕೆ ಇನ್ನೊಂದು ತಂಡ ವಿರೋಧ ವ್ಯಕ್ತಪಡಿಸಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್, ಸನ್‍ರೈಸರ್ಸ್ ಹೈದ್ರಾಬಾದ್ ಹಾಗೂ ಡೆಲ್ಲಿ ಡೇರ್ ಡೇವಿಲ್ಸ್ ತಲಾ ಮೂರು ಅಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿವೆ.

ಇಬ್ಬರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕಿಂಗ್ಸ್ ಇಲೆವನ್ ಪಂಜಾಬ್ ಮನವಿ ಮಾಡಿದೆ. ಆದರೆ ರಿಟೇನ್ ಪದ್ಧತಿಯ ಕುರಿತು ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಒಂದು ವೇಳೆ ರಿಟೇನ್ ಪದ್ಧತಿಯನ್ನು ಕೈ ಬಿಟ್ಟರೆ ಐಪಿಎಲ್ ತಂಡಗಳ ಸಂಪೂರ್ಣ ಚಿತ್ರಣವೇ ಬದಲಾಗಲಿದೆ. ಈ ವೇಳೆ ಸಿಎಸ್‍ಕೆಗೆ ಮರಳಲು ತುದಿಗಾಲಲ್ಲಿ ನಿಂತಿರುವ ಕೂಲ್ ಕ್ಯಾಪ್ಟನ್ ಧೋನಿ, ಅದೇ ತಂಡಕ್ಕೆ ಮರಳುವುದು ಸಂದೇಹವಾಗಿದೆ.

ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಐಪಿಎಲ್‍ನಿಂದ ಎರಡು ವರ್ಷಗಳ ಕಾಲ ಟೂರ್ನಿಯಿಂದ ಅಮಾನತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಈ ಬಾರಿ ಟೂರ್ನಿಗೆ ಮರಳಲಿವೆ. ಈ ತಂಡಗಳ ಆಟಗಾರರು ಕಳೆದೆರಡು ಆವೃತ್ತಿಗಳಲ್ಲಿ ರೈಸಿಂಗ್ ಪುಣೆ ಜಯಂಟ್ಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. ಈ ಬಾರಿ ಮತ್ತೆ ಎಲ್ಲಾ ಅಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, ರಿಟೇನ್ ಪದ್ಧತಿ, ಆಟಗಾರರ ಸಂಬಳ, ತಂಡದ ಸದಸ್ಯರ ಸಂಖ್ಯೆ, ಪಂದ್ಯಗಳ ಹಕ್ಕು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಕುರಿತು ಮುಂದಿನ ಕೆಲ ವಾರಗಳಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.

ಇದನ್ನೂ ಓದಿ: ಐಪಿಎಲ್ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ಪಾಲು: ಎಷ್ಟು ಕೋಟಿ ಬಿಡ್? ಇನ್ನು ಮುಂದೆ 1 ಪಂದ್ಯದ ಟಿವಿ ಶುಲ್ಕ ಎಷ್ಟು ಗೊತ್ತಾ?

 

https://www.facebook.com/MSDhoni/posts/1926010637622156

https://www.facebook.com/Seenumama/photos/pcb.1103706643095460/1103706599762131/?type=3&theater

https://www.facebook.com/Seenumama/photos/pcb.1103706643095460/1103706619762129/?type=3&theater

https://www.facebook.com/msdhoni7781/photos/pcb.1453118581403674/1453118448070354/?type=3&theater

https://www.facebook.com/msdhoni7781/photos/pcb.1453118581403674/1453118384737027/?type=3&theater

https://www.facebook.com/msdhoni7781/photos/pcb.1453118581403674/1453118424737023/?type=3&theater

Comments

Leave a Reply

Your email address will not be published. Required fields are marked *