ಪತ್ನಿಗೆ ತಿಳಿಸಬೇಡಿ ಎಂದು ಹೇಳಿ ಮೊದಲ ಕ್ರಶ್ ಹೆಸರು ರಿವೀಲ್ ಮಾಡಿದ್ರು ಧೋನಿ

ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಮ್ಮ ಮೊದಲ ಕ್ರಶ್ ಹೆಸರು ರಿವಿಲ್ ಮಾಡಿದ್ದು, ಆದ್ರೆ ಈ ಕುರಿತು ತಮ್ಮ ಪತ್ನಿ ಸಾಕ್ಷಿಗೆ ತಿಳಿಸಬೇಡಿ ಎಂದು ಹೇಳಿದ್ದಾರೆ.

ತಂಡದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಧೋನಿ ಅವರಿಗೆ ನಿರೂಪಕರು ನಿಮ್ಮ ಮೊದಲ ಕ್ರಶ್ ಯಾರು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ, ನನ್ನ ಜೀವನದಲ್ಲಿ ಮೊದಲು ಇಷ್ಟ ಪಟ್ಟಿದ್ದ ಹುಡುಗಿ ಹೆಸರು ಸ್ವಾತಿ ಎಂದು ಉತ್ತರಿಸಿದ್ದಾರೆ.

ನಾನು 1990 ರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸ್ವಾತಿ ಮೇಲೆ ನನಗೆ ಮನಸ್ಸಾಗಿತ್ತು ಎಂದು ಧೋನಿ ತಿಳಿಸಿದ್ದಾರೆ. ಸಾಧಾರಣವಾಗಿ ತಮ್ಮ ಖಾಸಗಿ ಜೀವನದ ವಿಚಾರನ್ನು ಸಾರ್ವಜನಿಕವಾಗಿ ಮಾತನಾಡದ ಧೋನಿ ತಮ್ಮ ಪತ್ನಿಗೆ ಈ ವಿಷಯವನ್ನು ತಿಳಿಸಬೇಡಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಈ ವೇಳೆ ನಿರೂಪಕ ಮತ್ತೊಂದು ಶಾಕ್ ನೀಡಿ ಸ್ವಾತಿ ಸದ್ಯ ಈ ಕಾರ್ಯಕ್ರಮದಲ್ಲೇ ಇದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವತಿಯನ್ನು ವೇದಿಕೆ ಗೆ ಪ್ರವೇಶ ಮಾಡುವಂತೆ ತಿಳಿಸಿದ್ದರು. ಆದರೆ ಬಳಿಕ ಸ್ವಾತಿ ಇಲ್ಲಿ ಇಲ್ಲ ಎಂದು ಹೇಳಿ ಪ್ರಾಂಕ್ ಮಾಡಿದ್ದಾಗಿ ತಿಳಿಸಿದರು.

ಧೋನಿ ತಮ್ಮ ಪಿಯುಸಿ ವ್ಯಾಸಂಗವನ್ನು ರಾಂಚಿಯ ದೇವ್ ಜೆವಿಎಂ ಕಾಲೇಜಿನಲ್ಲಿ ಓದಿದ್ದರು.

https://www.facebook.com/TheChennaiSuperKings/videos/1958882664130119/

Comments

Leave a Reply

Your email address will not be published. Required fields are marked *