ಚಾಂಪಿಯನ್‌ ಭಾರತಕ್ಕೆ ಎಷ್ಟು ಕೋಟಿ ಬಹುಮಾನ? ನ್ಯೂಜಿಲೆಂಡ್‌ಗೆ ಎಷ್ಟು?

ದುಬೈ: ಚಾಂಪಿಯನ್ಸ್‌ ಟ್ರೋಫಿ (ICC Champions Trophy) ಗೆದ್ದ ಭಾರತ 2.24 ಮಿಲಿಯನ್‌ ಡಾಲರ್‌ (19.45 ಕೋಟಿ ರೂ.) ನಗದು ಬಹುಮಾನ ಪಡೆದಿದೆ. ರನ್ನರ್-ಅಪ್‌ ಆಗಿರುವ ನ್ಯೂಜಿಲೆಂಡ್‌ 1.12 ದಶಲಕ್ಷ ಡಾಲರ್‌ (9.75 ಕೋಟಿರೂ.) ಪಡೆದಿದೆ.

ಈ ಬಾರಿ ಟೂರ್ನಿಯ ಒಟ್ಟು ನಗದು ಬಹುಮಾನ ಮೊತ್ತ 6.9 ದಶಲಕ್ಷ ಡಾಲರ್‌ಗೆ (60  ಕೋಟಿ ರೂ.) ಏರಿಕೆಯಾಗಿತ್ತು. 2017ಕ್ಕೆ ಹೋಲಿಸಿದರೆ ಒಟ್ಟು ನಗದು ಬಹುಮಾನದ ಮೊತ್ತವನ್ನು 53% ಏರಿಕೆ ಮಾಡಲಾಗಿತ್ತು.

2017 ರಲ್ಲಿ ಒಟ್ಟು ಬಹುಮಾನದ ಮೊತ್ತ 4.5 ದಶಲಕ್ಷ ಡಾಲರ್‌ ಆಗಿದ್ದರೆ ವಿಜೇತ ತಂಡಕ್ಕೆ 2.22 ದಶಲಕ್ಷ ಡಾಲರ್‌ ಸಿಕ್ಕಿತ್ತು.  ಇದನ್ನೂ ಓದಿ: ಬಿದ್ದು ಎದ್ದು ಗೆದ್ದ ರಾಹುಲ್‌ – ಟೀಕೆಗಳಿಗೆ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟ ಕನ್ನಡಿಗ

ಸೆಮಿಫೈನಲ್‌ನಲ್ಲಿ ಸೋತ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆ‍ಫ್ರಿಕಾಗೆ 5,60,000 ಡಾಲರ್‌ (4.86 ಕೋಟಿ ರೂ.) ನೀಡಲಾಗುತ್ತದೆ. ತಂಡಗಳು ಆಡುವ ಪ್ರತಿಯೊಂದು ಪಂದ್ಯವು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖ್ಯವಾಗಿರುತ್ತದೆ. ಇದನ್ನೂ ಓದಿ: ಐಸಿಸಿಯ 24 ಟೂರ್ನಿಗಳಲ್ಲಿ 23 ರಲ್ಲಿ ಗೆಲುವು – ಇದು ರೋ’ಹಿಟ್‌’ ಕ್ಯಾಪ್ಟನ್ಸಿ ಟ್ರ್ಯಾಕ್‌ ರೆಕಾರ್ಡ್‌

ಪ್ರತಿ ಪಂದ್ಯ ಗೆದ್ದರೂ 34,000 ಡಾಲರ್‌ (29.52 ಲಕ್ಷ ರೂ.) ಹಣವನ್ನು ಐಸಿಸಿ ನೀಡಿದೆ. ಐದು ಮತ್ತು ಆರನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 3,50,000 ಡಾಲರ್‌ ನೀಡಲಾಗಿದೆ. ಏಳನೇ ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳಿಗೆ 1,40,000 ಡಾಲರ್‌ ಸಿಕ್ಕಿದೆ.

 

1996 ರ ನಂತರ ಪಾಕಿಸ್ತಾನ (Pakistan) ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜಿಸಿತ್ತು. ಭಾರತ ತನ್ನ ಎಲ್ಲಾ 5 ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಫೆ.19 ರಿಂದ  ಟೂರ್ನಿ ಆರಂಭಗೊಂಡಿತ್ತು.