ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ

ಮಡಿಕೇರಿ: ಖ್ಯಾತ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕೊಡಗಿನ ಅಶ್ವಿನಿ ಪೊನ್ನಪ್ಪ ಮಾಡೆಲ್ ಪೊನ್ನಚೇಟಿರ ಕರನ್ ಮೇದಪ್ಪ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ಈ ಅದ್ಧೂರಿ ವಿವಾಹ ಸಮಾರಂಭ ಕೊಡವರ ಸಂಪ್ರದಾಯದಂತೆ ನಡೆಯುತ್ತಿದೆ. ಕೊಡವ ಉಡುಗೆ ತೊಟ್ಟು ವಿವಾಹ ಸಾಂಪ್ರದಾಯಕವಾಗಿ ನಡೆಯುತ್ತಿದೆ.

ವಿವಾಹ ನಂತರ ಸಂಪ್ರಾದಾಯದಂತೆ ವಧು ಮತ್ತು ವರ ಇಬ್ಬರು ಗಂಗೆಪೂಜೆ ಕಾರ್ಯವನ್ನು ಮಾಡಲಿದ್ದಾರೆ. ಅಮ್ಮತ್ತಿಯ ಕೊಡವ ಸಮಾಜದ ಹಾಲ್ ನಲ್ಲಿ ಮಂಟಪವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ.

ಇನ್ನು ಕೊಡವ ಸಂಪ್ರದಾಯದಂತೆ ಕೊಡಗಿನ ಖಾದ್ಯಗಳಾದ ಪಂದಿಕರಿ, ಕಡಂಬಟ್ಟು ಪೋರ್ಕ್ ಡ್ರೈ, ಚಿಕ್ಕನ್, ಮಟ್ಟನ್ ಸೇರಿದಂತೆ ಇನ್ನಿತರ ಬಗೆ ಬಗೆಯ ಖಾದ್ಯಗಳು ಮತ್ತು ಸಸ್ಯಹಾರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ವಿವಾಹ ಮಹೋತ್ಸವಕ್ಕೆ ಕುಟುಂಬಸ್ಥರು ಮತ್ತು ಆಪ್ತರನ್ನು ಆಹ್ವಾನ ಮಾಡಲಾಗಿದ್ದು ಗಣ್ಯಾತಿಗಣ್ಯರು ಆಗಮಿಸಿದ್ದಾರೆ.

Comments

Leave a Reply

Your email address will not be published. Required fields are marked *