ಬಸವಣ್ಣ, ಅಂಬೇಡ್ಕರ್ ಪ್ರತಿಮೆಗೆ ಹಾರಹಾಕಿ ತಾವೂ ಹಾರಬದಲಿಸಿ ಮದ್ವೆಯಾದ ಅಂತರ್ಜಾತಿ ಜೋಡಿ

ಧಾರವಾಡ: ಅಂತರ್ಜಾತಿಯ ಮದುವೆಯೊಂದು ಸರಳ ಹಾಗೂ ವಿಶಿಷ್ಟ ರೀತಿಯಲ್ಲಿ ನಡೆದ ಘಟನೆ ಧಾರವಾಡದಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ತಿಳುವಳ್ಳಿ ಗ್ರಾಮದ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿಯನ್ನು ಧಾರವಾಡ ಜಿಲ್ಲೆಯ ದಲಿತ ಯುವಕನೋರ್ವ ಪ್ರೀತಿಸಿ ಮದುವೆಯಾಗಿದ್ದಾನೆ. ಸುನೀತಾ(18) ಎಂಬ ಲಿಂಗಾಯತ ಜಾತಿಯ ಯುವತಿ ಹಾಗೂ ಜಿಲ್ಲೆಯ ಕಿತ್ತೂರ ಗ್ರಾಮದ ಶರಣಪ್ಪ ಎಂಬ ಯುವಕ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಅದ್ರೆ ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧವಿತ್ತು. ಈ ಹಿನ್ನೆಲೆ ದಲಿತ ಸಂಘಟನೆ ಎದುರು ಇವರು ತಮ್ಮ ಅಳಲನ್ನ ತೊಡಿಕೊಂಡಿದ್ದರು. ಇಂದು ದಲಿತ ಸಂಘಟನೆಯ ಮುಖಂಡರು ಬೌದ್ಧ ಧರ್ಮದ ಆಚರಣೆಯಂತೆ ಇವರ ಮದುವೆಯನ್ನ ಮಾಡಿಸಿದ್ದಾರೆ. ಈ ಮದುವೆಗೆ ಯುವಕನ ಮನೆಯವರು ಮಾತ್ರ ಬಂದಿದ್ದರು.

ಮದುವೆಗೂ ಮೊದಲು ಈ ಯುವಜೋಡಿ ಬಸವಣ್ಣನವರ ಹಾಗೂ ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕಿ ಆಶೀರ್ವಾದ ಪಡೆದ ನಂತರ ತಾವೂ ಕೂಡಾ ಹಾರ ಬದಲಿಸುವ ಮದುವೆಯಾದ್ರು.

Comments

Leave a Reply

Your email address will not be published. Required fields are marked *