ಕಾಳಿ ದೇವಿಗೆ ಅವಮಾನ – ಭಾರೀ ಆಕ್ರೋಶದ ಬಳಿಕ ಕ್ಷಮೆ ಕೇಳಿದ ಉಕ್ರೇನ್

ಕೀವ್: ಉಕ್ರೇನ್‌ನ ರಕ್ಷಣಾ ಸಚಿವಾಲಯ (Ukraine Defense Ministry) ಹಿಂದೂ ದೇವತೆ ಕಾಳಿಯನ್ನು (Kali) ವಿಕೃತವಾಗಿ ಚಿತ್ರಿಸಿ ಅದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಭಾರತ (India) ಹಾಗೂ ಹಿಂದೂ (Hindu) ಸಮುದಾಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ವಿವಾದಿತ ಕಾಳಿ ದೇವಿಯ ಚಿತ್ರವನ್ನು ಹಂಚಿಕೊಂಡಿದ್ದಕ್ಕೆ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನ್ ಝಾಪರೋವಾ (Emine Dzhaparova) ಕ್ಷಮೆ ಕೇಳಿದ್ದಾರೆ.

ಕಾಳಿ ದೇವಿಯನ್ನು ಈ ರೀತಿಯಾಗಿ ಚಿತ್ರಿಸಿರುವುದಕ್ಕೆ ಉಕ್ರೇನ್ ವಿಷಾದಿಸುತ್ತದೆ. ಯುರೋಪಿಯನ್ ದೇಶ ಭಾರತದ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತದೆ. ಭಾರತದ ಸಹಾಯವನ್ನು ಪ್ರಶಂಸಿಸುತ್ತದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 30 ರಂದು ಉಕ್ರೇನ್‌ನ ರಕ್ಷಣಾ ಸಚಿವಾಲಯ ‘ವರ್ಕ್ ಆಫ್ ಆರ್ಟ್’ ಎಂಬ ಶೀರ್ಷಿಕೆಯೊಂದಿಗೆ ಕಾಳಿ ದೇವಿಯನ್ನು ಹೋಲುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿತ್ತು. ಸ್ಫೋಟದ ಹೊಗೆಯಲ್ಲಿ ಹಾಗೂ ಅಮೆರಿಕದ ನಟಿ ಮರ್ಲಿನ್ ಮನ್ರೋ ಅವರ ‘ಫ್ಲೈಯಿಂಗ್ ಸ್ಕರ್ಟ್’ ಭಂಗಿಯಲ್ಲಿ ದೇವಿಯನ್ನು ಹೋಲುವ ಚಿತ್ರವನ್ನು ಬರೆಯಲಾಗಿತ್ತು. ಈ ಚಿತ್ರವನ್ನು ಉಕ್ರೇನ್‌ನ ಕಲಾವಿದ ಮ್ಯಾಕ್ಸಿಮ್ ಪಲೆಂಕೊ ಅವರು ರಚಿಸಿದ್ದರು. ಇದನ್ನೂ ಓದಿ: ಎಆರ್ ರೆಹಮಾನ್ ಸಂಗೀತ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಪುಣೆ ಪೊಲೀಸರು

ಈ ಚಿತ್ರವನ್ನು ಉಕ್ರೇನ್‌ನ ರಕ್ಷಣಾ ಸಚಿವಾಲಯ ಪೋಸ್ಟ್ ಮಾಡಿದ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ಉಂಟಾಗಿತ್ತು. ಟ್ವಿಟ್ಟರ್ ಬಳಕೆದಾರರು ಕಾಳಿ ದೇವಿಗೆ ಅವಮಾನ ಮಾಡಲಾಗಿದೆ. ಭಾರತೀಯರು ಹಾಗೂ ಹಿಂದೂ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಕಿಡಿಕಾರಿದ್ದರು.

ವಿವಾದಿತ ಕಾಳಿ ದೇವಿಯನ್ನು ಹೋಲುವ ಚಿತ್ರವನ್ನು ಅಳಿಸಬೇಕೆಂಬ ಒತ್ತಾಯದ ಬಳಿಕ ಸಚಿವಾಲಯ ತನ್ನ ಟ್ವೀಟ್ ಅನ್ನು ಅಳಿಸಿ ಕ್ಷಮೆ ಕೇಳಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ