ಆಫೀಸ್ ವ್ಯವಸ್ಥೆ ಸುಧಾರಣೆಗೆ ಯೋಗಿಯಿಂದ ಮತ್ತೊಂದು ಖಡಕ್ ಆದೇಶ

ಲಕ್ನೋ: ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರವನ್ನೇ ಡಾನ್‍ಗಳಿಗೆ ನೀಡಬೇಕೆಂದು ಸೂಚಿಸಿದ್ದ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಈಗ ಸರ್ಕಾರ ಎಲ್ಲ ಕಚೇರಿಗಳಲ್ಲಿ ಬಯೋಮಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವಂತೆ ಆದೇಶಿಸಿದ್ದಾರೆ.

ಶನಿವಾರ ರಾತ್ರಿ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಯೋಗಿ, ಆಫೀಸ್‍ನಿಂದ ಆರಂಭವಾಗಿ ಬ್ಲಾಕ್ ಹಂತದ ಆಫೀಸ್ ವರೆಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಅಳವಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಹೊರತಾಗಿ ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಪ್ರಸ್ತುತ ಆಯ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿ ಕೆಲಸದ ಮಾಹಿತಿ ಮತ್ತು ಗ್ರಾಮದ ಪಂಚಾಯತ್‍ನ ಪ್ರಧಾನ್ ಸಂಪರ್ಕ ವಿಳಾಸವನ್ನು ಬೋರ್ಡ್ ಮೂಲಕ ಪ್ರಕಟಿಸಬೇಕೆಂದು ಸೂಚಿಸಿದ್ದಾರೆ.

ಅಷ್ಟೇ ಅಲ್ಲದೇ ಪ್ರಧಾನ ಮಂತ್ರಿ ಅವಾಸ್ ಯೋಜನದ ಗುರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರ ಹೆಸರುಗಳು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ ಸೇರ್ಪಡೆಯಾಗಬೇಕು ಎಂದು ಯೋಗಿ ಹೇಳಿದ್ದಾರೆ.

ಇದನ್ನೂ ಓದಿ: ಸಾಮಾನ್ಯ ಕೈದಿಗಳಿಗೆ ನೀಡೋ ಆಹಾರವನ್ನೇ ಡಾನ್‍ಗಳಿಗೂ ನೀಡಿ: ಯೋಗಿ ಆದಿತ್ಯನಾಥ್

Comments

Leave a Reply

Your email address will not be published. Required fields are marked *