ಸುಮಲತಾಗೆ ಇನ್ಸ್‌ಪೆಕ್ಟರ್ ಕ್ಲಾಸ್!

– ಮಹಿಳಾ ಪೊಲೀಸರು ಕಣ್ಣೀರು

ಮಂಡ್ಯ: ಜಿಲ್ಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ, ಹಬ್ಬದ ದಿನ ರಾತ್ರಿ ಆದರೂ ಪ್ರಚಾರ ಮಾಡಿದ್ದಾರೆ. ಇದರಿಂದ ಇನ್ಸ್ ಪೆಕ್ಟರ್ ಹತ್ತು ಮುಕ್ಕಾಲು ಆಯ್ತು ಏನ್ ಆಟ ಆಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಬರೀಶ್ ಊರಾದ ದೊಡ್ಡರಸಿನಕೆರೆ ಗ್ರಾಮದ ಮಹಿಳೆಯರು ವಿಶೇಷವಾಗಿ ಸ್ವಾಗತಿಸಿ ಮನೆಗೆ ಕರೆಸಿದ್ದು, ಪ್ರಚಾರ ಕೈಗೊಂಡಿದ್ದರು. ಈ ವೇಳೆ ಸುಮಲತಾ ರಾತ್ರಿಯಾದರೂ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ಮಾಡುತ್ತಿದ್ದರು. ಆಗ ಇನ್ಸ್ ಪೆಕ್ಟರ್ ಹತ್ತು ಮುಕ್ಕಾಲು ಆಯ್ತು ಏನ್ ಆಟ ಆಡುತ್ತಿದ್ದೀರಾ. ಬೆಳಗ್ಗೆಯಿಂದ ಒಂದು ತುತ್ತು ಅನ್ನ ತಿಂದಿಲ್ಲ ಗೊತ್ತಾ? ಎಂದು ಹಬ್ಬದ ದಿನವೂ ಮಹಿಳಾ ಪೊಲೀಸರು ಕಣ್ಣೀರು ಹಾಕಿಕೊಂಡು ಹೋಗಿದ್ದಾರೆ. ಟೈಮ್ ಎಷ್ಟು ಗೊತ್ತಾ? ಪ್ರಚಾರ ಸಾಕು ನಿಲ್ಲಿಸಿ ಎಂದು ಸುಮಲತಾಗೆ ಇನ್ಸ್ ಪೆಕ್ಟರ್ ಐಯಣ್ಣಗೌಡ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ವೇಳೆ ಸುಮಲತಾ ಲೇಟ್ ಆಗಿದ್ದಕ್ಕೆ ಸಮಜಾಯಿಸಿ ಕೊಟ್ಟಿದ್ದಾರೆ. ಪ್ರಚಾರ ಮಾಡುವಾಗ ಅಭಿಮಾನಿಗಳು ಬಂದು ನಮ್ಮ ಊರಿಗೆ ಬನ್ನಿ ಎಂದು ಕರೆದುಕೊಂಡು ಹೋಗುತ್ತಾರೆ. ಹೀಗಾಗಿ ಇಲ್ಲ ಅನ್ನೋಕೆ ಆಗಲ್ಲ. ಮಾಮೂಲಿ ರಾಜಕಾರಣಿಗಳ ಪ್ರಚಾರ ಬೇರೆ ನಾವೇ ಬೇರೆ. ಜನರ ಸಂಖ್ಯೆ ಜಾಸ್ತಿಯಿರುತ್ತದೆ. ಪೊಲೀಸರು ಜನರನ್ನ ಕಂಟ್ರೋಲ್ ಮಾಡಬೇಕು. ನಮಗೆ ಅವರು ರೂಟ್ ಮಾಡಿಕೊಡಲಿ, ನಾವು ಹೋಗುತ್ತೀವಿ. ನಾರ್ಮಲ್ ಆಗಿ 10 ಗಂಟೆಗೆ ನಾನು ಪ್ರಚಾರ ಮುಗಿಸುತ್ತಿದ್ದೇನೆ ಎಂದು ದೊಡ್ಡರಸಿನಕೆರೆಯಲ್ಲಿ ಲೇಟ್ ಆಗಿದ್ದನ್ನ ಸುಮಲತಾ ಸಮರ್ಥಿಸಿಕೊಂಡಿದ್ದಾರೆ.

ಇನ್ಸ್ ಪೆಕ್ಟರ್ ಅವಾಜ್‍ಗೆ ಬೆಚ್ಚಿ ಪ್ರಚಾರ ವಾಹನದಿಂದ ಕೂಡಲೇ ಸುಮಲತಾ ಅವರು ಕೆಳಗಿಳಿದಿದ್ದಾರೆ. ಈ ವೇಳೆ ಅಭಿಮಾನಿಗಳಿಂದ ತಳ್ಳಾಟ ನೂಕಾಟ ಆಗಿದೆ. ಕೊನೆಗೆ ನೀತಿ ಸಂಹಿತೆಗೆ ಬೆದರಿ ಸುಮಲತಾ ಜಾಗ ಖಾಲಿ ಮಾಡಿದ್ದಾರೆ ಎನ್ನಲಾಗಿದೆ.

ಇಂದಿನಿಂದ ಯಶ್-ದಶಣ್ ಪ್ರಚಾರ:
ಯುಗಾದಿ ಬಿಡುವಿನಲ್ಲಿದ್ದ ಯಶ್ ಇಂದು ಮತ್ತೆ ಸುಮಲತಾ ಪರ ಕ್ಯಾಂಪೇನ್ ಮಾಡಲಿದ್ದಾರೆ. ಮಳವಳ್ಳಿ ತಾಲೂಕಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಯಶ್ ಪ್ರಚಾರ ನಡೆಸಲಿದ್ದಾರೆ. ದರ್ಶನ್ ಇಂದು ಪ್ರಚಾರಕ್ಕೆ ಬರುತ್ತಿಲ್ಲ. ದರ್ಶನ್ ಬೆಂಗಳೂರು ಕೇಂದ್ರ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಪ್ರಚಾರ ನಡೆಸಲಿದ್ದಾರೆ. ಇತ್ತ ಸುಮಲತಾ ನಾಗಮಂಗಲ ತಾಲೂಕಿನಲ್ಲಿ ಪ್ರಚಾರ ನಡೆಸಲಿದ್ದಾರೆ. ನಾಗಮಂಗಲದಲ್ಲಿ ನಿಖಿಲ್ ಮತಯಾಚಿಸಲಿದ್ದಾರೆ.

Comments

Leave a Reply

Your email address will not be published. Required fields are marked *