ಡ್ರಗ್ ಪೆಡ್ಲರ್‌ಗಳ ಜೊತೆಗೆ ಪೊಲೀಸರ ನಂಟು ಆರೋಪ – ಇನ್‌ಸ್ಪೆಕ್ಟರ್‌ ಸೇರಿ 11 ಪೊಲೀಸರು ಸಸ್ಪೆಂಡ್‌

ಬೆಂಗಳೂರು: ಡ್ರಗ್ ಪೆಡ್ಲರ್‌ಗಳ ಜೊತೆಗೆ ಪೊಲೀಸರ ನಂಟು ಆರೋಪದಲ್ಲಿ ಇನ್‌ಸ್ಪೆಕ್ಟರ್‌ ಸೇರಿದಂತೆ 11 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಚಾಮರಾಜಪೇಟೆ, ಜೆಜೆ ನಗರ ಪೊಲೀಸರನ್ನು ಅಮಾನತು ಮಾಡಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅದೇಶ ಹೊರಡಿಸಿದ್ದಾರೆ.

ನಾಲ್ವರು ಡ್ರಗ್ ಪೆಡ್ಲರ್‌ಗಳ ಜೊತೆಗೆ ಸಂಬಂಧ ಹೊಂದಿದ ಆರೋಪದಲ್ಲಿ ಚಾಮರಾಜಪೇಟೆ ಇನ್‌ಸ್ಪೆಕ್ಟರ್‌ ಟಿ.ಮಂಜಣ್ಣ ಸೇರಿ ಹನ್ನೊಂದು ಪೊಲೀಸ್‌ ಸಿಬ್ಬಂದಿ ಅಮಾನತಾಗಿದ್ದಾರೆ.

ಪೊಲೀಸರು ತಿಂಗಳಿಗೆ ಒಂದೂವರೆಯಿಂದ 2 ಲಕ್ಷ ಮಾಮೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.