ಇನ್‍ಸ್ಪೆಕ್ಟರ್, ಮೇಲಧಿಕಾರಿಗಳಷ್ಟೇ ಡ್ರಂಕ್ & ಡ್ರೈವ್ ತಪಾಸಣೆ ಮಾಡ್ಬೇಕು – ಸುಲಿಗೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕ್ರಮ

ಬೆಂಗಳೂರು: ಡ್ರಿಂಕ್ & ಡ್ರೈವ್  (Drink and Drive) ತಪಾಸಣೆ ನಡೆಸಿ ಎಎಸ್‍ಐ ಹಾಗೂ ಕಾನ್‍ಸ್ಟೇಬಲ್ ಹೆಸರಲ್ಲಿ ಹಣ ಪಡೆಯುತ್ತಿದ್ದ ವಿಚಾರವಾಗಿ ಪೊಲೀಸ್ ಇಲಾಖೆ ಹೊಸ ಕ್ರಮಕ್ಕೆ ಮುಂದಾಗಿದೆ.

ಇನ್ನು ಮುಂದೆ ಇನ್ಸ್ಪೆಕ್ಟರ್ (Inspector) ಹಾಗೂ ಅವರ ಮೇಲಿನ ಅಧಿಕಾರಿಗಳಷ್ಟೇ ಡ್ರಿಂಕ್ & ಡ್ರೈವ್ ತಪಾಸಣೆ ನಡೆಸುವಂತೆ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಮೌಖಿಕವಾಗಿ ಸೂಚಿಸಿದ್ದಾರೆ. ಇದರಿಂದಾಗಿ ಎಎಸ್‍ಐ ಹಾಗೂ ಕಾನ್‍ಸ್ಟೇಬಲ್ ಹೆಸರಿನಲ್ಲಿ ನಡೆಯುತ್ತಿದ್ದ ಸುಲಿಗೆಯನ್ನು ನಿಲ್ಲಿಸಲು ಇಲಾಖೆ ಈ ಪ್ರಯೋಗಕ್ಕೆ ಮುಂದಾಗಿದೆ. ಅಲ್ಲದೇ ವಾರದಲ್ಲಿ ಎರಡು ದಿನ ಮಾತ್ರ ಡ್ರಂಕ್ & ಡ್ರೈವ್ ತಪಾಸಣೆ ನಡೆಸುವಂತೆ ಸಂಚಾರಿ ಪೊಲೀಸರ ಸಭೆಯಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಮುಂದುವರೆದ ಮಳೆಯಾರ್ಭಟ – ಭೀಮಾ, ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ

ಸುಲಿಗೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಹಲವಾರು ದೂರುಗಳು ಬಂದಿದ್ದವು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹಣ ಪಡೆದು ಕೇಸ್ ಹಾಕದೆ ಕಳಿಸುತ್ತಾರೆ ಎಂದು ಹಲವರು ಆರೋಪಿಸಿದ್ದರು. ಇದೇ ಕಾರಣಕ್ಕೆ ಸಂಚಾರಿ ವಿಭಾಗದ ಹಿರಿಯ ಅಧಿಕಾರಿಗಳು ಈ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮಳೆಯ ಆರ್ಭಟ – ವಿವಿಧೆಡೆ ಶಾಲಾ, ಕಾಲೇಜುಗಳಿಗೆ ರಜೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]