INS ವಿಕ್ರಮಾದಿತ್ಯನ ದರ್ಶನಕ್ಕೆ ಕಿಕ್ಕಿರಿದ ಜನಸ್ತೋಮ -ಆಸೆ ಹೊತ್ತು ಬಂದವರಿಗೆ ನಿರಾಸೆ!

ಕಾರವಾರ: ನೌಕಾ ದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ದೇಶದ ಅತಿದೊಡ್ಡ ಯುದ್ಧ ವಿಮಾನ ವಾಹಕ ನೌಕೆ ವೀಕ್ಷಣೆಗೆ ಭಾರತೀಯ ನೌಕಾದಳ ಇಂದು ಅವಕಾಶ ಮಾಡಿಕೊಟ್ಟಿತ್ತು.

ಇಂದು ಬೆಳಗ್ಗೆ 10 ಘಂಟೆಯಿಂದ ಸಂಜೆ 5 ಗಂಟೆವರೆಗೆ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಐ.ಎನ್.ಎಸ್ ವಿಕ್ರಮಾದಿತ್ಯ ಹಡಗಿನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ, ಹೊರ ರಾಜ್ಯದಿಂದಲೂ ವಿಕ್ರಮಾದಿತ್ಯ ಹಡಗನ್ನು ನೋಡಲು ಅರಗಾ ಗ್ರಾಮದ ಕದಂಬ ನೌಕಾನೆಲೆಯಲ್ಲಿ ಸಾವಿರಾರು ಜನರು ಸೇರಿದ್ದರು.

ಬೆಳಗ್ಗೆಯಿಂದ ಕಿಕ್ಕಿರಿದು ತುಂಬಿದ್ದ ಜನರಿಗೆ ವಿಕ್ರಮಾದಿತ್ಯ ಹಡಗನ್ನು ನೋಡುವ ಭಾಗ್ಯ ದೊರೆಯಿತು. ಆದರೆ ಮಧ್ಯಾಹ್ನದ ನಂತರ ವೀಕ್ಷಕರ ಸಂಖ್ಯೆ ಹೆಚ್ಚಾದ್ದರಿಂದ ಭದ್ರತೆ ದೃಷ್ಟಿಯಿಂದ ಬಂದ್ ಮಾಡಲಾಯಿತು. ಇದರಿಂದಾಗಿ ರಾಜ್ಯ ಹಾಗೂ ಹೊರ ರಾಜ್ಯದಿಂದ ವೀಕ್ಷಣೆಗಾಗಿ ಬಂದಿದ್ದ ಜನರಿಗೆ ನಿರಾಸೆಯಾಗಿ ಹಿಂತಿರುಗುವಂತಾಯಿತು. .

ಬೆಳಗ್ಗೆಯಿಂದ ಅವಕಾಶ ಪಡೆದ ವಿದ್ಯಾರ್ಥಿಗಳು ಹಾಗೂ ಜನರು ವಿಕ್ರಮಾದಿತ್ಯ ಹಡಗಿನ ವೀಕ್ಷಣೆ ಮಾಡಿದರು. ವಿಕ್ರಮಾದಿತ್ಯನ ಮೇಲ್ಭಾಗದ ಡೆಕ್‍ನಲ್ಲಿ ಮಾತ್ರ ಜನರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಭಾಗದ ರನ್ ವೇ, ರ್ಯಾಡರ್ (radar signal) ಗಳನ್ನು ಜನರು ವೀಕ್ಷಿಸಿ ಕಣ್ತುಂಬಿಕೊಂಡರು.

Comments

Leave a Reply

Your email address will not be published. Required fields are marked *