ಗಾಯಗೊಂಡು ಫಾರ್ಮಸಿಗೆ ಬಂದ ಶ್ವಾನ -ವಿಡಿಯೋ ವೈರಲ್

ಅಂಕಾರಾ: ಸಾಮಾನ್ಯವಾಗಿ ಮನುಷ್ಯರು ಗಾಯಗೊಂಡರೆ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಇಲ್ಲೊಂದು ಶ್ವಾನ ಗಾಯಗೊಂಡ ತಕ್ಷಣ ಫಾರ್ಮಸಿಗೆ ಓಡಿ ಬಂದಿರುವ ಘಟನೆ ಟರ್ಕಿಯಲ್ಲಿ ನಡೆದಿದೆ.

ಕಳೆದ ವಾರ ಟರ್ಕಿಯ ಇಸ್ತಾಂಬುಲ್‍ನಲ್ಲಿ ಈ ಘಟನೆ ನಡೆದಿದ್ದು, ನಾಯಿ ಫಾರ್ಮಸಿಗೆ ಓಡಿ ಬಂದು ಚಿಕಿತ್ಸೆ ಪಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಗಾಯಗೊಂಡು ದಾರಿತಪ್ಪಿ ಶ್ವಾನ, ಬಾನು ಸೆಂಗಿಜ್ ನಡೆಸುತ್ತಿದ್ದ ಫಾರ್ಮಸಿ(ಔಷಧಾಲಯಕ್ಕೆ) ಬಂದಿದೆ. ಗಾಯಗೊಂಡು ಫಾರ್ಮಸಿಗೆ ಬಂದು ಮಲಗಲು ಜಾಗ ಹುಡುಕುತ್ತಿರುವ ನಾಯಿ ಪ್ರಾಣಿ ಪ್ರೇಮಿಯಾಗಿರುವ ಎಂ.ಎಸ್. ಸೆಂಗಿಜ್ ಅವರ ಕಣ್ಣಿಗೆ ಬಿದ್ದಿದೆ. ಕೂಡಲೇ ಅವರು ನಾಯಿಯನ್ನು ನೋಡಿ ಬೇಬಿ, ಸಮಸ್ಯೆ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ನಾಯಿಯ ಒಂದು ಕಾಲಿಗೆ ಗಾಯವಾಗಿ ರಕ್ತ ಬರುತ್ತಿತ್ತು. ಇದನ್ನು ನೋಡಿದ ಸೆಂಗಿಜ್ ಅವರು ಗಾಯಗೊಂಡಿದ್ದ ನಾಯಿಗೆ ಚಿಕಿತ್ಸೆ ನೀಡಿದ್ದಾರೆ. ಅವರು ಚಿಕಿತ್ಸೆ ನೀಡುವಾಗ ನಾಯಿಯು ಸುಮ್ಮನೆ ನೋಡುತ್ತಾ ಚಿಕಿತ್ಸೆ ಪಡೆಯುತ್ತಿತ್ತು ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಚಿಕಿತ್ಸೆ ಪಡೆದ ತಕ್ಷಣ ನಾಯಿ ಅಲ್ಲಿಯೇ ಮಲಗಿಕೊಂಡಿತು. ನಾನು ಬೇರೆ ಏನಾದರೂ ಸಮಸ್ಯೆ ಇದೆಯಾ ಎಂದು ಪರೀಕ್ಷೆ ಮಾಡಿದೆ. ಆದರೆ ಬೇರೆ ಯಾವ ಗಾಯವೂ ಆಗಿರಲಿಲ್ಲ. ಸ್ವಲ್ಪ ಸಮಯದ ನಂತರ ಅದು ನನಗೆ ಧನ್ಯವಾದ ಹೇಳಿತು ಎಂದು ತಿಳಿಸಿದ್ದಾರೆ.

ತನಗೆ ಅಗತ್ಯವಾದ ಚಿಕಿತ್ಸೆ ಸಿಕ್ಕ ನಂತರ ನಾಯಿ ಅಲ್ಲಿಯೇ ವಿಶ್ರಾಂತಿ ಪಡೆದಿದೆ. ಸ್ವಲ್ಪ ಸಮಯದವರೆಗೂ ಫಾರ್ಮಸಿಯಲ್ಲಿ ಚೇತರಿಸಿಕೊಂಡು ಬಳಿಕ ಹೋಗಿದೆ. ಈ ಎಲ್ಲವೂ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿದೆ. ಇದೀಗ ಆಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *