ಆಂಬುಲೆನ್ಸ್ ಸಿಗದೆ ತಾಯಿಯನ್ನ ಮಗ ಹೊತ್ತೊಯ್ದ ಪ್ರಕರಣ: ತೀವ್ರ ಗಾಯಗೊಂಡಿದ್ದ ಅಜ್ಜಿ ಸಾವು

ಕಲಬುರಗಿ: ಆಂಬುಲೆನ್ಸ್ ಸಿಗದೇ ತಾಯಿಯನ್ನು ಮಗ ಹೊತ್ತೊಯ್ದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀವ್ರ ಗಾಯಗೊಂಡಿದ್ದ ಅಜ್ಜಿ ಮೃತಪಟ್ಟಿದ್ದಾರೆ.

ಕಲಬುರಗಿಯ ಉದನೂರ ಕ್ರಾಸ್ ಬಳಿ ಸಿದ್ದಮ್ಮ ಎಂಬ ಅಜ್ಜಿಗೆ ಪಲ್ಸರ್ ಬೈಕ್ ಡಿಕ್ಕಿ ಹೊಡೆದಿತ್ತು. ಘಟನೆಯ ನಂತರ ಆಕೆಯ ಮಗ ಮಹಾಂತೇಷ 108 ಆಂಬುಲೆನ್ಸ್ ಗೆ ಕರೆ ಮಾಡಿದ್ರು ಸಕಾಲಕ್ಕೆ ಬರಲಿಲ್ಲ.

ನಂತರ ಸ್ಥಳೀಯರ ಬಳಿ ನೆರವು ಕೇಳಿದ್ರು ಮಾನವಿಯತೆ ಮರೆತ ಜನ ಯಾರು ಸಹಾಯ ಮಾಡಿರಲಿಲ್ಲ. ಕೊನೆಗೆ ಮಗ ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ತಾಯಿಯನ್ನು ಹೊತ್ತು 45 ನಿಮಿಷಗಳ ಕಾಲ ಹೊತ್ತು ಸಾಗಿದ್ದರು. ನಂತರ ಇದನ್ನು ಗಮನಿಸಿದ ಪೊಲೀಸರು ಎಸ್ಕಾರ್ಟ್ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.

ಮೃತ ಸಿದ್ದಮ್ಮಳ ಕಡು ಬಡವರಾಗಿದ್ದು, ಈ ಕುರಿತು ಸುದ್ದಿ ಪಬ್ಲಿಕ್ ಟಿವಿ ಪ್ರಸಾರ ಮಾಡಿದ ನಂತರ ಯುನೈಟೆಡ್ ಆಸ್ಪತ್ರೆಯವರು ಉಚಿತ ಚಿಕಿತ್ಸೆ ಕೊಟ್ಟು ಮಾನವಿಯತೆ ಮೆರೆದಿದ್ದಾರೆ. ಆದ್ರೆ ಘಟನೆ ನಂತರ ಅಜ್ಜಿಗೆ ತೀವ್ರ ರಕ್ತ ಆದ ಕಾರಣ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಅಪಘಾತವಾಗಿ ಗಾಯಗೊಂಡಿದ್ದ ತಾಯಿಯನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿದ ಮಗ

https://www.youtube.com/watch?v=_FXNSRP_ceg

Comments

Leave a Reply

Your email address will not be published. Required fields are marked *