ಬೀಜಿಂಗ್: ಚೀನಾದ ಮೃಗಾಲಯದ ಸಿಬ್ಬಂದಿ ಜೀವಂತ ಕತ್ತೆಯನ್ನು ಹುಲಿಗಳಿಗೆ ಆಹಾರವಾಗಿ ನೀಡಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಯಾಂಗು ಪ್ರಾಂತ್ಯದಲ್ಲಿರುವ ಮೃಗಾಲಯದ ಸಿಬ್ಬಂದಿ ಕತ್ತೆಯನ್ನು ಆಹಾರವಾಗಿ ನೀಡಿದ್ದಕ್ಕೆ ಈಗ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಏನಿದೆ?
ಮೃಗಾಲಯದ ಸಿಬ್ಬಂದಿ ಮೇಲಿನಿಂದ ಕತ್ತೆಯನ್ನು ನೀರಿಗೆ ತಳ್ಳಿದ್ದಾರೆ. ಕತ್ತೆ ನೀರಿಗೆ ಬಿದ್ದ ಕೂಡಲೇ ಎರಡು ಹುಲಿಗಳು ಅದರ ಮೇಲೆ ಬಿದ್ದಿದೆ. ಒಂದು ಹಿಂದಿನಿಂದ ದಾಳಿ ನಡೆಸಿದರೆ ಇನ್ನೊಂದು ಮುಂದುಗಡೆಯಿಂದ ದಾಳಿ ನಡೆಸಿದೆ. ನೀರಿನಲ್ಲೇ ಕತ್ತೆ ದಾಳಿಯಿಂದ ಪಾರಾಗಲು ಹರಸಾಹಸ ಪಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿ ಖಂಡನೆ ವ್ಯಕ್ತವಾದ ಬಳಿಕ ಮೃಗಾಲಯ ಸಿಬ್ಬಂದಿ ಇನ್ನು ಮುಂದೆ ಈ ರೀತಿ ಅಮಾನವೀಯ ವರ್ತನೆ ಎಸಗುವುದಿಲ್ಲ ಎಂದು ಹೇಳಿ ಕ್ಷಮೆ ಕೇಳಿದ್ದಾರೆ.
ಮೃಗಾಲಯದ ಬರುತ್ತಿದ್ದ ಆದಾಯ ಕಡಿಮೆಯಾಗಿತ್ತು. ಹೀಗಾಗಿ ಮೃಗಾಲಯದ ಶೇರುದಾರರು ಅಸಮಾಧಾನಗೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
https://www.youtube.com/watch?v=5y1I8T34YE0








Leave a Reply