ಇನ್ಫಿಯಿಂದ ಫಿನ್‍ಲ್ಯಾಂಡ್ ಕಂಪೆನಿ ಖರೀದಿ- ಖರೀದಿಸಿದ್ದು ಯಾಕೆ? ಎಷ್ಟು ಕೋಟಿ ಡೀಲ್?

ಬೆಂಗಳೂರು: ಭಾರತದ ಎರಡನೇ ಅತೀ ದೊಡ್ಡ ಐಟಿ ಸಂಸ್ಥೆಯಾಗಿರುವ ಇನ್ಫೋಸಿಸ್ ಶುಕ್ರವಾರ ಫಿನ್‍ಲ್ಯಾಂಡ್ ಮೂಲದ ಫ್ಲುಯಿಡೋ ಸಂಸ್ಥೆಯನ್ನು ಖರೀದಿಸಿದೆ.

ಫ್ಲುಯಿಡೋ ಸಂಸ್ಥೆಯನ್ನು ಖರೀದಿಸಿರುವುದಾಗಿ ಇನ್ಫಿ ಅಧಿಕೃತ ಮಾಹಿತಿ ನೀಡಿದ್ದು, 65 ಮಿಲಿಯನ್ ಯುರೋ (ಸುಮಾರು 544 ಕೋಟಿ ರೂ.)ಗೆ ಒಪ್ಪಂದ ನಡೆದಿರುವುದಾಗಿ ತಿಳಿಸಿದೆ. ಈ ಖರೀದಿ ಒಪ್ಪಂದ 2019ರ ಮೂರನೇ ತ್ರೈಮಾಸಿಕದಲ್ಲಿ ಅಂತ್ಯಗೊಳ್ಳಲಿದೆ.

2010 ರಲ್ಲಿ ಸ್ಥಾಪನೆಯಾಗಿದ್ದ ಫ್ಲುಯಿಡೋ ಅಮೆರಿಕದ ಕ್ಲೌಡ್ ಕಂಪ್ಯೂಟಿಂಗ್ ಸೇಲ್ಸ್ ಫೋರ್ಸ್ ಕಂಪೆನಿಗೆ ಸಲಹೆ ನೀಡುತಿತ್ತು. ಇನ್ಫೋಸಿಸ್ ಅಧ್ಯಕ್ಷ ರವಿ ಕುಮಾರ್ ಹೇಳಿಕೆ ಬಿಡುಗಡೆಗೊಳಿಸಿ, ಮುಂಚೂಣಿ ಸಾಫ್ಟ್ ವೇರ್ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದ ಫ್ಲುಯಿಡೋ ಡೆನ್ಮಾರ್ಕ್, ಸ್ವೀಡನ್, ನಾರ್ವೆ, ಸ್ಲೋವಾಕಿಯಾ ನಗರದಲ್ಲಿ ಈ ಸಂಸ್ಥೆಯೂ ತನ್ನ ಸೇವೆಗಳನ್ನು ನೀಡುತ್ತಿತ್ತು. ಇನ್ಫಿ ಸಂಸ್ಥೆಗೆ ಫ್ಲುಯಿಡೋ ಸೇರ್ಪಡೆಯಾಗಿದ್ದು, ಗ್ರಾಹಕರ ಡಿಜಿಟಲ್ ಆದ್ಯತೆಗಳನ್ನು ಪೂರೈಸಲು ನೆರವಾಗಲಿದೆ ಅಲ್ಲದೇ ಮಾರಾಟ ಸಂಸ್ಥೆಯ ಪೂರೈಕೆಯಲ್ಲಿ ಇನ್ಫಿ ಸ್ಥಾನ ಬಲಪಡಿಸಲು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಫ್ಲುಯಿಡೋ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೈ ಮಕಲಾ, ಇನ್ಫೋಸಿಸ್ ಸಂಸ್ಥೆಯೊಂದಿಗೆ ಸೇರುವುದರಿಂದ ಗ್ರಾಹರಿಗೆ ಜಾಗತಿಕ ಮಟ್ಟದ ಡಿಜಿಟಲ್ ಸೇವೆ ಒದಗಿಸಲು ಸಹಾಯಕವಾಗಲಿದೆ. ಅಲ್ಲದೇ ಹಲವು ಪ್ರದೇಶಗಳಲ್ಲಿನ ನಮ್ಮ ಗ್ರಾಹಕರನ್ನು ಇನ್ಫಿಯೊಂದಿಗೆ ಸಂಪರ್ಕ ಕಲ್ಪಿಸಲು ಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *