ವಜ್ರದ ವ್ಯಾಪಾರಿ ಪುತ್ರಿಯೊಂದಿಗೆ ಮೋದಿ ತವರಿನಲ್ಲಿ ಅದಾನಿ ಪುತ್ರನ ನಿಶ್ಚಿತಾರ್ಥ

ಗಾಂಧಿನಗರ: ಪ್ರತಿಷ್ಠಿತ ಉದ್ಯಮಿ ಗೌತಮ್ ಅದಾನಿ (Gautam Adani) ಅವರ ಪುತ್ರ ಜೀತ್ ಅದಾನಿ (Jeet Adani) ಅವರ ನಿಶ್ಚಿತಾರ್ಥ ಭಾನುವಾರ ನೆರವೇರಿದೆ.

ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದಿವಾ ಜೈಮಿನ್ ಶಾ ಅವರೊಂದಿಗೆ ನಿಶ್ಚಿತಾರ್ಥ ನೆರವೇರಿದೆ. ಆಪ್ತ ಬಳಗದವರು ಹಾಗೂ ಕೌಟುಂಬಿಕ ಸ್ನೇಹಿತರನ್ನಷ್ಟೇ ನಿಶ್ಚಿತಾರ್ಥಕ್ಕೆ ಆಹ್ವಾನಿಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಮೈತುಂಬಾ ಬಟ್ಟೆ ಧರಿಸಿಲ್ಲವೆಂದು ಪತ್ನಿಯ ಕೊಲೆಗೈದ ಪತಿ

ಜೀತ್ ಅದಾನಿ ನಿಶ್ಚಿತಾರ್ಥದ ಫೋಟೋಗಳು ಇದೀಗ ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಕಸೂತಿ ಲೆಹೆಂಗಾದಲ್ಲಿ ವಧು ದಿವಾ ಕಂಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಭಗವಾನ್ ಶ್ರೀಕೃಷ್ಣನನ್ನೇ ವರಿಸಿದ ಎಲ್‍ಎಲ್‍ಬಿ ಪದವೀಧರೆ!

ಪೆನ್ಸಿಲ್ವೇನಿಯಾ ಸ್ಕೂಲ್ ಆಫ್ ಎಂಜಿನಿಯರಿಂಗ್ ವಿಶ್ವವಿದ್ಯಾನಿಲಯದಲ್ಲಿ ಅಪ್ಲೈಡ್‌ ಸೈನ್ಸಸ್ ಪದವಿ ಪೂರ್ಣಗೊಳಿಸಿದ ಜೀತ್ ಅದಾನಿ, 2019ರಲ್ಲಿ ಅದಾನಿ ಸಮೂಹ (Adani Group) ಸೇರಿಕೊಂಡರು. ಪ್ರಸ್ತುತ ಅದಾನಿ ಸಮೂಹದ ಫೈನಾನ್ಸ್ ಉಪಾಧ್ಯಕ್ಷರಾಗಿದ್ದಾರೆ. ಜೊತೆಗೆ ಅದಾನಿ ಏರ್‌ಪೋರ್ಟ್ ವ್ಯವಹಾರದೊಂದಿಗೆ ಅದಾನಿ ಲ್ಯಾಬ್‌ಗಳನ್ನ ಮುನ್ನಡೆಸುತ್ತಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *