ಕೆನಡಾ ಸಂಸತ್‍ನಲ್ಲಿ ಹಿಂದೂಧ್ವಜ ಹಾರಿಸಿದ ಕನ್ನಡಿಗ

ಒಟ್ಟಾವಾ: ಖಲಿಸ್ಥಾನಿಗಳ ಕಾರಣದಿಂದ ಭಾರತ-ಕೆನಡಾ (India- Canada) ನಡ್ವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೆನಡಾದಲ್ಲಿರುವ ಖಲಿಸ್ಥಾನಿ ಉಗ್ರರು ಹಿಂದೂಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂತಹ ಕೆನಡಾದಲ್ಲಿ, ಅದರಲ್ಲೂ ಅಲ್ಲಿನ ಸಂಸತ್‍ನಲ್ಲಿಯೇ (Parliament) ಕನ್ನಡಿಗರೊಬ್ಬರು ದೀಪಾವಳಿ ಆಚರಿಸಿದ್ದಾರೆ.

ಹೌದು. ಸಂಸದ ಚಂದ್ರ ಆರ್ಯ (MP Chandra Arya) ಅವರು ಪಾರ್ಲಿಮೆಂಟ್ ಹಿಲ್‍ನಲ್ಲಿ ದೀಪಾವಳಿ ಆಯೋಜಿಸಿದ್ದರು. ಈ ವೇಳೆ ಓಂ ಎಂದು ಬರೆದಿರುವ ಹಿಂದೂ ಧ್ವಜವನ್ನು ಹಾರಿಸಿದ್ದಾರೆ. ಈ ಕ್ಷಣಕ್ಕೆ ನೂರಾರು ಹಿಂದೂಗಳು ಸಾಕ್ಷಿಯಾಗಿದ್ದಾರೆ.

ಪಾರ್ಲಿಮೆಂಟ್ ಹಿಲ್‍ನಲ್ಲಿ ದೀಪಾವಳಿ ಆಯೋಜಿಸಿದ್ದಕ್ಕೆ ನನಗೆ ಸಂತಸವಾಗಿದೆ. ಈ ಸಂದರ್ಭದಲ್ಲಿ ನಾವು ‘ಓಂ’ ಚಿಹ್ನೆ ಒಳಗೊಂಡ ಹಿಂದೂ ಧ್ವಜವನ್ನು (Hindu Flag) ಹಾರಿಸಿದೆವು. ಈ ಆಚರಣೆಗೆ ಕೆನಡಾದಲ್ಲಿರುವ 67 ಹಿಂದೂ ಮತ್ತು ಇಂಡೋ-ಕೆನಡಾ ಸಂಘಟನೆಗಳು ಬೆಂಬಲ ನಿಡಿದ್ದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನಿಂದಲೇ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ: ಮೋದಿ

ಮತ್ತೊಂದ್ಕಡೆ ಪ್ಯಾರೀಸ್ ಏರ್‍ಪೋರ್ಟ್‍ನಲ್ಲಿ 30 ಮುಸ್ಲಿಮವರು ಸಾಮೂಹಿಕವಾಗಿ ನಮಾಜ್ ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ಫ್ರಾನ್ಸ್ ರಾಜಕಾರಣಿಗಳು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಆದ್ರೆ, ಇದನ್ನು ಫ್ರಾನ್ಸ್ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.