ಬಾಂಬ್ ಬೆದರಿಕೆ – ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಸಾಂದರ್ಭಿಕ ಚಿತ್ರ

ಮುಂಬೈ: ಬಾಂಬ್ ಬೆದರಿಕೆ ಕರೆ ಬಂದಿದ್ದರಿಂದ ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ ಉತ್ತರಪ್ರದೇಶದ ಲಕ್ನೋಗೆ ತೆರಳಬೇಕಿದ್ದ ಇಂಡಿಗೋ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ.

ಶನಿವಾರ ಬೆಳಗ್ಗೆ 6.05ಕ್ಕೆ ಇಂಡಿಗೋ ಸಂಸ್ಥೆಯ ಗೋ ಏರ್ ಫ್ಲೈಟ್ ಜಿ8 329 ವಿಮಾನ ಮುಂಬೈ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿತ್ತು. ಈ ವೇಳೆ ವಿಮಾನ ನಿಲ್ದಾಣದಲ್ಲಿದ್ದ ಓರ್ವ ಮಹಿಳೆ ಲಕ್ನೋಗೆ ಹೊರಟಿರುವ ವಿಮಾನದಲ್ಲಿ ಬಾಂಬ್ ಇದೆ ಎಂದು ರಂಪಾಟ ನಡೆಸಿದ್ದರು. ಅಲ್ಲದೇ ಕೆಲವು ವ್ಯಕ್ತಿಗಳ ಫೋಟೋಗಳನ್ನು ಹಿಡಿದುಕೊಂಡು ಇವರು ದೇಶದ ಭದ್ರತೆಗೆ ಅಪಾಯವುಂಟುಮಾಡುತ್ತಾರೆಂದು ಹೇಳಿದ್ದರು.

ಕೂಡಲೇ ಅಧಿಕಾರಿಗಳು ವಿಮಾನದ ಹಾರಾಟವನ್ನು ತಡೆದು ತುರ್ತು ಭೂಸ್ಪರ್ಷ ಮಾಡಿಸಿದ್ದಾರೆ. ಸ್ಥಳಕ್ಕೆ ಬಂದ ಬಾಂಬ್ ತಪಾಸಣಾ ಅಧಿಕಾರಿಗಳು ವಿಮಾನವನ್ನು ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಯಾವುದೇ ಬಾಂಬ್ ಇಲ್ಲ ವಿಮಾನ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಕೇಂದ್ರೀಯ ಕೈಗಾರಿಕಾ ಭದ್ರತಾ ದಳ(ಸಿಐಎಸ್‍ಎಫ್) ಮಹಿಳೆಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

Comments

Leave a Reply

Your email address will not be published. Required fields are marked *