ಭಾರತದ ವಕ್ಫ್ ಆಸ್ತಿ ಪಾಕಿಸ್ತಾನದಷ್ಟಿದೆ: ಯತ್ನಾಳ್

– ಜಮೀರ್ ಅಶ್ವಮೇಧ ಕುದುರೆಯನ್ನ ನಾನು ತಡೆದಿದ್ದೇನೆ
– ನಾವು ಜಾತಿ ಎಂದು ಹೋದರೆ ಕಡಿದು ಹಾಕುತ್ತಾರೆ

ವಿಜಯಪುರ: ಭಾರತದಲ್ಲಿ ಈಗಲೇ ಒಂದು ಪಾಕಿಸ್ತಾನ ನಿರ್ಮಾಣ ಆಗಿದೆ. ಭಾರತದ ವಕ್ಫ್ ಆಸ್ತಿ ಪಾಕಿಸ್ತಾನದಷ್ಟಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ( Basanagouda Patil Yatnal) ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಇನ್ನೊಂದು ಪಾಕಿಸ್ತಾನ ನಿರ್ಮಾಣ ಆಗಿದೆ. ದಿನದಿಂದ ದಿನಕ್ಕೆ ಆಸ್ತಿ ವಕ್ಫ್ ಪಾಲಾಗುತ್ತಿದೆ. ನಾಲಾಯಕ್ ಕಾಂಗ್ರೆಸ್ ಮಾಡಿದ ಕಾನೂನು ಇದಾಗಿದೆ. ವಕ್ಫ್ ವಿರುದ್ಧ ದೊಡ್ಡ ಸಂಗ್ರಾಮ ಆಗಬೇಕಿದೆ. ದೆಹಲಿಯಲ್ಲಿ ಮೌಲ್ವಿ ಚಂದ್ರಬಾಬು ನಾಯ್ಡು, ನಿತೇಶ್‌ಗೆ ಧಮ್ಕಿ ಹಾಕಿದ್ದಾನೆ. ಬಿಲ್‌ಗೆ ಬೆಂಬಲ ನೀಡಿದರೆ 5 ಲಕ್ಷ ಜನ ಸೇರಿಸುತ್ತೇನೆ ಎಂದಿದ್ದಾನೆ ಎಂದು ಹೇಳಿದರು. ಇದನ್ನೂ ಓದಿ: ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಬೇಕು: ಅರವಿಂದ ಬೆಲ್ಲದ್‌

ಅಂದು ಕುಂಕುಮ ಹಚ್ಚದ ಸಿಎಂ ಈಗ ಕುಂಕುಮ ಹಚ್ಚಿಕೊಳ್ಳುತ್ತಿದ್ದಾನೆ. ಚಾಮುಂಡೇಶ್ವರಿ ಬಳಿ ಹೋಗಿ ಈಗ ಕುಂಕುಮ ಹಚ್ಚಿ ಎನ್ನುತ್ತಿದ್ದಾನೆ. ವಿಜಯಪುರದ ವಾಗ್ದೇವಿ ದೇಗುಲದ ಒಳಗೆ ಸಿಎಂ ಹೋಗಲಿಲ್ಲ. ವಾಗ್ದೇವಿ ಶಾಪದಿಂದಲೇ ಮುಡಾದಲ್ಲಿ ಸಿಎಂ ಸಿಕ್ಕಿಹಾಕಿಕೊಂಡಿದ್ದಾನೆ. ಆದರೆ ವಿಜಯಪುದಲ್ಲಿ ಮತಾಂಧ ಮೌಲ್ವಿ ಮನೆಗೆ ಹಲ್ಲು ಕಿರಿಯುತ್ತಾ ಹೋಗುತ್ತಾನೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿವಮೊಗ್ಗ | ಎಟಿಎಂ, ಬ್ಯಾಂಕ್‍ಗಳಿಗೆ ಭದ್ರತಾ ಸಿಬ್ಬಂದಿ ನೇಮಕಕ್ಕೆ ಎಸ್‍ಪಿ ಸೂಚನೆ

2029ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲಿದ್ದಾರೆ. ಅದಕ್ಕೆ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಾವು ಜಾತಿ ಎಂದು ಹೋದರೆ ಕಡಿದು ಹಾಕುತ್ತಾರೆ. ಬಾಂಗ್ಲಾದಲ್ಲಿ ಏನಾಗುತ್ತಿದೆ ಅದಕ್ಕೆ ನಾವು ಎಚ್ಚೆತ್ತುಕೊಳ್ಳಬೇಕಿದೆ. ಈಗ ಹೋರಾಟ ಶುರುವಾಗಿದೆ, ಮುಂದೆ ಹೋರಾಟ ದೊಡ್ಡದಾಗಬೇಕು ಎಂದರು.

ಕಾಂಗ್ರೆಸ್‌ನಲ್ಲೆ ಶಾಸಕರು ಜಮೀರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಜಮೀರ್ ಪ್ರವಾಸ ತಡೆಯಿರಿ ಎನ್ನುತ್ತಿದ್ದಾರೆ. ಜಮೀರ್ ನನಗೆ ನಿಮ್ಮ ಅಪ್ಪನ ಆಸ್ತಿಯಾ ಎಂದಿದ್ದ, ನಾ ಇದು ನಿಮ್ಮ ಅಪ್ಪಂದ ಎಂದು ಕೇಳಿದ್ದೆ. ಜಮೀರ್ ಅಶ್ವಮೇಧವನ್ನು ಕಲಬುರ್ಗಿ, ಬೀದರ್‌ನಲ್ಲಿ ಯಾರು ತಡೆಯಲಿಲ್ಲ. ನಾನು ಜಮೀರ್ ಅಶ್ವಮೇಧ ಕುದುರೆಯನ್ನ ವಿಜಯಪುರದಲ್ಲಿ ತಡೆದಿದ್ದೇನೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬೀದರ್ | ಈಗ ಸರ್ಕಾರಿ ಆಸ್ಪತ್ರೆಯೂ ವಕ್ಫ್ ಆಸ್ತಿ!