ಒಡಿಶಾದಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಕೊರೊನಾ ಆಸ್ಪತ್ರೆ

ಭುವನೇಶ್ವರ್: ಸಾವಿರ ಹಾಸಿಗೆ ಸಾಮರ್ಥ್ಯದ ದೇಶದ ಮೊದಲ ಕೋವಿಡ್-19 ಆಸ್ಪತ್ರೆ ನಿರ್ಮಾಣ ಮಾಡಲು ಒಡಿಶಾ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಇಂದು ಒಪ್ಪಂದವೂ ಕೂಡ ನಡೆದಿದ್ದು, ಮುಂದಿನ 15 ದಿನಗಳಲ್ಲಿ ಭುವನೇಶ್ವರದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ.

500 ಹಾಸಿಗೆ ಸಾಮರ್ಥ್ಯದ ಎರಡು ಪ್ರತ್ಯೇಕ ಆಸ್ಪತ್ರೆಗಳಾಗಿದ್ದು, ಸಿಎಸ್‍ಆರ್ ನಿಧಿ, ಒಡಿಶಾ ಮೈನಿಂಗ್ ಕಾರ್ಪೋರೇಷನ್, ಮಹಾನದಿ ಕೋಲ್ಫೀಲ್ಡ್ಸ್ ಲಿಮಿಟೆಡ್ ಈ ಯೋಜನೆಗೆ ಹಣ ಹೂಡಿಕೆ ಮಾಡಲಿದೆ.

ಮೈನಿಂಗ್ ಕಾರ್ಪೋರೇಷನ್, ಮಹಾನದಿ ಕೋಲ್ಫೀಲ್ಡ್ಸ್ ಲಿಮಿಟೆಡ್ ಜೊತೆ ಒಡಿಶಾ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ 15 ದಿನಗಳಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಸರ್ಕಾರ ಹೇಳಿದೆ. ಈ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ವಿಶೇಷ ಚಿಕಿತ್ಸೆ ಒಡಿಶಾ ಸರ್ಕಾರ ನೀಡಲಿದೆ.

ಅಸ್ಸಾಂನಲ್ಲಿ ಕ್ವಾರಂಟೈನ್ ಸೆಂಟರ್:
ಇತ್ತ ಅಸ್ಸಾಂನಲ್ಲೂ ಒಂದೇ ಒಂದು ಸೋಂಕು ಪತ್ತೆಯಾಗದಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಗುವಾಹಟಿಯಲ್ಲಿ 700 ಹಾಸಿಗೆ ಸಾಮರ್ಥ್ಯದ ಕ್ವಾರಂಟೈನ್ ಸೆಂಟರ್ ನಿರ್ಮಾಣ ಕಾರ್ಯ ನಡೆದಿದೆ.

ನೆಹರು ಸ್ಟೇಡಿಯಂನಲ್ಲಿ ಕ್ವಾರಂಟೈನ್ ಸೆಂಟರ್ ನಿರ್ಮಾಣ ಕಾರ್ಯ ನಡೆದಿದ್ದು, ಸಾರುಸಜೈ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಸುಮಾರು 200 ವೈದ್ಯರಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಕ್ವಾರಂಟೈನ್ ಸೆಂಟರ್ ನಿರ್ಮಾಣ ಕಾರ್ಯವನ್ನು ಇಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಸಾಮಾನ್ಯ ಆಸ್ಪತ್ರೆಗಳ ಜೊತೆಗೆ ಅಸ್ಸಾಂನಲ್ಲಿ ಕ್ವಾರಂಟೈನ್ ಸೆಂಟರ್ ಕೂಡ ಕಾರ್ಯ ನಿರ್ವಹಿಸಲಿದ್ದು, ಇತರೆ ರಾಜ್ಯ ಮತ್ತು ದೇಶಗಳಿಂದ ಬರುವ ಅನುಮಾನಸ್ಪದ ವ್ಯಕ್ತಿಗಳಿಗೆ ಈ ಸೆಂಟರ್ ನಲ್ಲಿ ಕ್ವಾರಂಟೈನ್ ನಿಗಾ ವಹಿಸಲಾಗುತ್ತದೆ.

Comments

Leave a Reply

Your email address will not be published. Required fields are marked *