ನವದೆಹಲಿ: ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸಿದ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.
ಮಾರಕ ಕೊರೊನಾ ವೈಸರ್‌ನಿಂದ ತಪ್ಪಿಸಿಕೊಳ್ಳಲು ಲಸಿಕೆ ಇಲ್ಲದ ದೇಶಗಳು ತುರ್ತಾಗಿ ಭಾರತದ ಕೋವ್ಯಾಕ್ಸಿನ್ ಬಳಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇನ್ಮುಂದೆ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರು ಎಲ್ಲಾ ದೇಶಗಳಿಗೂ ಹೋಗಬಹುದು. ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಬಳಿಕ ಎಲ್ಲಾ ದೇಶಗಳು ಈಗ ಕೋವ್ಯಾಕ್ಸಿನ್ ಬಳಸಬಹುದು ಕೊವಿಶೀಲ್ಡ್ ಜೊತೆಗೆ ಈಗ ಕೋವ್ಯಾಕ್ಸಿನ್ ಕೂಡ ವಿಶ್ವ ಅಧಿಕೃತ ಲಸಿಕೆಗಳ ಪಟ್ಟಿಗೆ ಸೇರಿದೆ. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

ಆರಂಭದಿಂದಲು ಭಾರತ ಕೋವ್ಯಾಕ್ಸಿನ್‍ಗೆ ಅನುಮೋದನೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ(WHO) ತಕರಾರು ಮಾಡುತ್ತಲೇ ಕೋವ್ಯಾಕ್ಸಿನ್ ಸಂಬಂಧ ಹಲವು ಡೀಟೈಲ್ಸ್ ನಮಗೆ ಸಿಕ್ಕಿಲ್ಲ ಎಂದು ಖ್ಯಾತೆ ತೆಗೆಯುತ್ತಿತ್ತು. ಭಾರತ ಯಾವಾಗ ಇತರ ದೇಶಗಳಿಗೆ ಲಸಿಕೆ ನೀಡೋದಿಲ್ಲ ಎಂದು ಕೆಲವು ಕ್ರಮಗಳನ್ನು ತೆಗೆದುಕೊಂಡಿತೋ ಅಂದು ಮೋದಿ ಸರ್ಕಾರದ ಒತ್ತಡಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಣಿದಿದೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

ವಿಶ್ವ ಆರೋಗ್ಯ ಸಂಸ್ಥೆ ಕೊನೆಗೂ ಭಾರತ ಕೋವ್ಯಾಕ್ಸಿನ್‍ಗೆ ಅನುಮೋದನೆ ನೀಡಿದೆ. ಈ ಮುನ್ನ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಕೋವ್ಯಾಕ್ಸಿನ್ ಅನುಮೋದಿಸಿದ್ದವು. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

Leave a Reply