ಭಾರತದ ಬ್ರಹ್ಮೋಸ್‌ ನಮ್ಮ ಪ್ಲ್ಯಾನ್‌ಗಳನ್ನೆಲ್ಲಾ ತಲೆಕೆಳಗೆ ಮಾಡಿತು – ಸತ್ಯ ಒಪ್ಪಿಕೊಂಡ ಪಾಕ್‌ ಪ್ರಧಾನಿ

– ರಾವಲ್ಪಿಂಡಿ ಏರ್‌ಪೋರ್ಟ್ ಧ್ವಂಸ ಆಗಿರೋದು ನಿಜ ಎಂದ ಶೆಹಬಾಜ್‌ ಷರೀಫ್‌

ಇಸ್ಲಾಮಾಬಾದ್‌: ಆಪರೇಷನ್ ಸಿಂಧೂರದ (Operation Sindoor) ಪರಾಕ್ರಮದ ಬಗ್ಗೆ ಪಾಕ್ ಪ್ರಧಾನಿ ಮತ್ತಷ್ಟು ಸತ್ಯ ಬಾಯಿಬಿಡ್ತಿದ್ದಾರೆ. ರಾವಲ್ಪಿಂಡಿ ಏರ್‌ಪೋರ್ಟ್ ಮೇಲೆ ಬ್ರಹ್ಮೋಸ್ ಕ್ಷಿಪಣಿಯ (BrahMos Missile) ದಾಳಿ ಆಯಿತು. ನಾವು ಪ್ಲ್ಯಾನ್‌ ಮಾಡುವ ಮೊದಲೇ ಅವರು ದಾಳಿ ಮಾಡಿದ್ದರು. ಇದು ನಮ್ಮ ಮಿಲಿಟರಿ ವೈಫಲ್ಯ ಅಂತ ಪಾಕ್ ಪ್ರಧಾನಿ ಶೆಹಬಾಜ್‌ ಷರೀಫ್ ಒಪ್ಪಿಕೊಂಡಿದ್ದಾರೆ.

ಅಜೆರ್ಬೈಜಾನ್‌ನ ಲಾಚಿನ್‌ನಲ್ಲಿ ನಡೆದ ಪಾಕಿಸ್ತಾನ-ಟರ್ಕಿ-ಅಜೆರ್ಬೈಜಾನ್ ತ್ರಿಪಕ್ಷೀಯ ಶೃಂಗಸಭೆಯಲ್ಲಿ (Pakistan-Turkey-Azerbaijan Trilateral Summit) ಮಾತನಾಡಿದ ಷರೀಫ್, ಮೇ 10ರಂದು ಬೆಳಗ್ಗಿನ ಜಾವ 4:30ಕ್ಕೆ ಪ್ರಾರ್ಥನೆ ಬಳಿಕ ಭಾರತದ ಮೇಲೆ ದಾಳಿ ಮಾಡಲು ಫೀಲ್ಡ್ ಮಾರ್ಷಲ್ ಅಸೀಮ್‌ ಮುನೀರ್ ನೇತೃತ್ವದ ನಮ್ಮ ಸೇನೆಯು ಪ್ಲ್ಯಾನ್‌ ಮಾಡಿತ್ತು. ಆದ್ರೆ ಭಾರತ ನಮ್ಮ ಯೋಜಿತ ದಾಳಿಯನ್ನೆಲ್ಲ ತಲೆಕೆಳಗೆ ಮಾಡಿತು ಅಂತ ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ರಾಜಕಾರಣಿಗಳೊಂದಿಗೆ ವೇದಿಕೆ ಹಂಚಿಕೊಂಡ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್

ನಾವು ದಾಳಿ ಮಾಡುವ ಮೊದಲೇ ಭಾರತ ಬ್ರಹ್ಮೋಸ್‌ನಿಂದ (ಸೂಪರ್‌ ಸಾನಿಕ್‌ ಕ್ರೂಸ್‌ ಕ್ಷಿಪಣಿ) ಪಾಕ್‌ನ ಹಲವು ಮಿಲಿಟರಿ ಕೇಂದ್ರಗಳು ಹಾಗೂ ವಾಯುನೆಲೆಗಳ ಮೇಲೆ ದಾಳಿ ಮಾಡಿತ್ತು. ನಮ್ಮ ಕಾರ್ಯತಂತ್ರದ ನೆಲೆಗಳನ್ನೂ ನಾಶಗೊಳಿಸಿತು. ಪಾಕಿಸ್ತಾನದ ವಿವಿಧ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಬ್ರಹ್ಮೋಸ್‌ ಕ್ಷಿಪಣಿ ದಾಳಿ ನಡೆಸಿದಾಗ ರಾವಲ್ಪಿಂಡಿಯ ನೂರ್‌ ಖಾನ್‌ ಮತ್ತು ಮುರಿಯ್‌ನ (ಚಕ್ವಾಲ್‌) ವಾಯುನೆಲೆಗಳು ಧ್ವಂಸವಾದವು. ಇದರಿಂದ ನಮ್ಮ ಯೋಜಿತ ದಾಳಿ ತಲೆಕೆಳಗಾಯಿತು. ಇದನ್ನೂ ಓದಿ: ಭಾರತ ಜಲಯುದ್ಧ; ಇತ್ತ ಅಫ್ಘಾನಿಸ್ತಾನದಿಂದಲೂ ಶಾಕ್‌ ಆತಂಕ, ಪಾಕ್‌ನಲ್ಲಿ ಚೀನಾ ಅಣೆಕಟ್ಟೆ ನಿರ್ಮಾಣ ಯಾಕೆ?

ಆಪರೇಷನ್‌ ಸಿಂಧೂರ ಭಾಗವಾಗಿ ಭಾರತ‌ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್‌ ಅನ್ನು ಪ್ರಯೋಗಿಸಿತ್ತು. ಇದಾದ ಬಳಿಕ ಪಾಕ್‌ ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಚೀನಾ ನಿರ್ಮಿತ ಡ್ರೋನ್‌ಗಳನ್ನು ಹಾರಿಸಿತ್ತು. ಇದನ್ನೂ ನಮ್ಮ ವಾಯುರಕ್ಷಣಾ ವ್ಯವಸ್ಥೆ ಎಸ್‌-400 ವಿಫಲಗೊಳಿಸಿತು.  ಇದನ್ನೂ ಓದಿ: ಗೋಲ್ಡನ್‌ ಡೋಮ್;‌ ಕ್ಷಿಪಣಿ ದಾಳಿಯಿಂದ ಅಮೆರಿಕ ರಕ್ಷಣೆಗೆ ಬಾಹ್ಯಾಕಾಶದಲ್ಲಿ ರಕ್ಷಾಕವಚ