ನವದೆಹಲಿ: ಭಾರತದ ಯುವ ಗ್ರ್ಯಾಂಡ್‍ಮಾಸ್ಟರ್ 16 ವರ್ಷದ ಆರ್ ಪ್ರಗ್ನಾನಂದ ಅವರು ಆನ್‍ಲೈನ್ ರ್ಯಾಪಿಡ್ ಚೆಸ್ ಪಂದ್ಯಾವಳಿಯಾದ ಏರ್‍ಥಿಂಗ್ಸ್ ಮಾಸ್ಟರ್ಸ್‍ನ ಎಂಟನೇ ಸುತ್ತಿನಲ್ಲಿ ವಿಶ್ವದ ನಂ 1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸೆನ್ ಅವರನ್ನು ದಂಗುಬಡಿಸಿದ್ದಾರೆ.
ಕಾರ್ಲ್‍ಸೆನ್‍ರ ಸತತ ಮೂರು ಗೆಲುವಿನ ಓಟವನ್ನು ನಿಲ್ಲಿಸಲು ಸೋಮವಾರದ ಆರಂಭದಲ್ಲಿ ನಡೆದ ಟಾರ್ರಾಸ್ಚ್ ವಿಭಾಗದ ೮ನೇ ಸುತ್ತಿನ ಆಟದಲ್ಲಿ ಪ್ರಗ್ನಾನಂದ ಅವರು 39 ನಡೆಗಳಲ್ಲಿ ಕಪ್ಪು ಕಾಯಿಗಳೊಂದಿಗೆ ಗೆದ್ದಿದ್ದಾರೆ.

ಭಾರತೀಯ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಅವರು, ಎಂಟು ಸುತ್ತುಗಳ ನಂತರ ಎಂಟು ಅಂಕಗಳೊಂದಿಗೆ ಜಂಟಿ 12ನೇ ಸ್ಥಾನದಲ್ಲಿದ್ದಾರೆ.
ಹಿಂದಿನ ಪಂದ್ಯಗಳಲ್ಲಿ ಲೆವ್ ಅರೋನಿಯನ್ ವಿರುದ್ಧ ಗೆಲುವು, ಎರಡು ಡ್ರಾಗಳು ಮತ್ತು ನಾಲ್ಕು ಆಟವನ್ನು ಸೋತಿದ್ದಾರೆ. ಅವರು ಅನೀಶ್ ಗಿರಿ ಮತ್ತು ಕ್ವಾಂಗ್ ಲೀಮ್ ಲೆ ವಿರುದ್ಧ ಡ್ರಾ ಮಾಡಿಕೊಂಡಿದ್ದು, ಎರಿಕ್ ಹ್ಯಾನ್ಸೆನ್, ಡಿಂಗ್ ಲಿರೆನ್, ಜಾನ್-ಕ್ರಿಜ್‍ಸ್ಟೋಫ್ ದುಡಾ ಮತ್ತು ಶಖ್ರಿಯಾರ್ ಮಮೆಡಿಯಾರೋವ್ ವಿರುದ್ಧ ಸೋತಿದ್ದರು. ಇದನ್ನೂ ಓದಿ: ಮುಸ್ಲಿಂ ಗೂಂಡಾಗಳಿಂದ ಕೊಲೆ – ಈಶ್ವರಪ್ಪ ಹೇಳಿಕೆಗೆ ಸತೀಶ್ ಜಾರಕಿಹೊಳಿ ಕಿಡಿ
ಕೆಲವು ತಿಂಗಳುಗಳ ಹಿಂದೆ ವಿಶ್ವ ಚಾಂಪಿಯನ್‍ಶಿಪ್ ಪಂದ್ಯದಲ್ಲಿ ನಾರ್ವೆಯ ವಿಶ್ವದ ನಂ 1 ಕಾರ್ಲ್‍ಸೆನ್ ವಿರುದ್ಧ ಸೋತ ರಷ್ಯಾದ ಇಯಾನ್ ನೆಪೆÇಮ್ನಿಯಾಚಿ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಡಿಂಗ್ ಲಿರೆನ್ ಮತ್ತು ಹ್ಯಾನ್ಸೆನ್ ಇಬ್ಬರೂ 15 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಪ್ರಗ್ನಾನಂದ ಅವರು, ಆನ್‍ಲೈನ್ ರ್ಯಾಪಿಡ್ ಟೂರ್ನಿಮೆಂಟ್‍ನ ಪ್ರಾಥಮಿಕ ಸುತ್ತುಗಳಲ್ಲಿ ಗೆಲುವಿಗೆ 3 ಮತ್ತು ಡ್ರಾಕ್ಕಾಗಿ 1 ಅಂಕಗಳನ್ನು ಪಡೆದಿದ್ದಾರೆ. ಪ್ರಾಥಮಿಕ ಹಂತದಲ್ಲಿ ಇನ್ನೂ ಏಳು ಸುತ್ತುಗಳು ಬಾಕಿ ಉಳಿದಿವೆ. ಇದನ್ನೂ ಓದಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿದಾನ ಮಾಡಿದ ತಾಯಿ!
ಆರ್ ಪ್ರಗ್ನಾನಂದ ಯಾರು?
ಪ್ರಗ್ನಾನಂದ ಅವರು ಅಭಿಮನ್ಯು ಮಿಶ್ರಾ, ಸೆರ್ಗೆಯ್ ಕರ್ಜಾಕಿನ್, ಗುಕೇಶ್ ಡಿ ಮತ್ತು ಜಾವೋಖಿರ್ ಸಿಂದರೋವ್ ಅವರ ಹಿಂದೆ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಸಾಧಿಸಿದ ಐದನೇ-ಕಿರಿಯ ವ್ಯಕ್ತಿಯಾಗಿದ್ದಾರೆ.
ಪ್ರಗ್ನಾನಂದ ಅವರು 2013ರಲ್ಲಿ 8 ವರ್ಷದೊಳಗಿನವರ ವಿಶ್ವ ಯೂತ್ ಚೆಸ್ ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ತಮ್ಮ 7ನೇ ವಯಸ್ಸಿನಲ್ಲಿಯೇ ಫೈಡ್ ಮಾಸ್ಟರ್ ಎಂಬ ಬಿರುದನ್ನು ಗಳಿಸಿದ್ದರು. ಅವರು 2015 ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.

2016ರಲ್ಲಿ, ಪ್ರಗ್ನಾನಂದ ಅವರು ತಮ್ಮ 10ನೇ ವಯಸ್ಸಿನಲ್ಲಿಯೇ ಇತಿಹಾಸದಲ್ಲಿ ಕಿರಿಯ ಅಂತರರಾಷ್ಟ್ರೀಯ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಏಪ್ರಿಲ್ 2021 ರಲ್ಲಿ, ಯುವ ಪ್ರತಿಭೆಗಳಿಗಾಗಿ ಜೂಲಿಯಸ್ ಬೇರ್ ಗ್ರೂಪ್ ಮತ್ತು ಚೇಸ್24.ಕಾಮ್ ಆಯೋಜಿಸಿದ ಆನ್‍ಲೈನ್ ಈವೆಂಟ್ ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್‍ನ ಮೊದಲ ಲೆಗ್ (ನಾಲ್ಕರಲ್ಲಿ) ಅವರು, ಫೋಲ್ಗರ್ ಚಾಲೆಂಜ್ ಅನ್ನು ಗೆದ್ದಿದ್ದರು.
ಪ್ರಗ್ನಾನಂದ ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ 2022ರ ಮಾಸ್ಟರ್ಸ್ ವಿಭಾಗದಲ್ಲಿ ಆಡಿದ್ದರು. ಅಲ್ಲಿ ಆಂಡ್ರೆ ಎಸಿಪೆಂಕೊ, ವಿದಿತ್ ಗುಜರಾತಿ ಮತ್ತು ನಿಲ್ಸ್ ಗ್ರಾಂಡೆಲಿಯಸ್ ವಿರುದ್ಧದ ಪಂದ್ಯಗಳನ್ನು ಗೆದ್ದಿದ್ದರು. ನಂತರ ಅಂತಿಮ ಸ್ಕೋರ್ 5.5 ನೊಂದಿಗೆ 12ನೇ ಸ್ಥಾನ ಪಡೆದಿದ್ದರು.

Leave a Reply