ಹಮಾಸ್ ರಾಕೆಟ್ ದಾಳಿಯಿಂದ ಕೇರಳದ ಶೀಜಾ ಆನಂದ್‍ಗೆ ಗಾಯ

– ಕಣ್ಣೂರಿನ ಕುಟುಂಬದಲ್ಲಿ ಆತಂಕ

ಜೆರುಸಲೆಂ: ಇಸ್ರೇಲ್ (Isreal) ಹಾಗೂ ಹಮಾಸ್ (Hamas) ಉಗ್ರರ ನಡುವಿನ ಕಾದಾಟದಲ್ಲಿ ಕೇರಳದ ಕಣ್ಣೂರು ಮೂಲದ ಮಹಿಳೆಯೊಬ್ಬರು ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ.

ಮಹಿಳೆಯನ್ನು ಶೀಜಾ ಆನಂದ್ (Shija Anand) (41) ಎಂದು ಗುರುತಿಸಲಾಗಿದೆ. ಇವರು ಕಳೆದ 7 ವರ್ಷಗಳಿಂದ ಇಸ್ರೇಲ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಅವರು ಭಾರತದಲ್ಲಿ ವಾಸ ಮಾಡುತ್ತಿರುವ ತಮ್ಮ ಪತಿಗೆ ವೀಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು.

ಅಂತೆಯೇ ಶನಿವಾರ ಮುಂಜಾನೆ ಇಸ್ರೇಲ್ ಮೇಲಿನ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ ಮತ್ತೆ ಶೀಜಾ ಅವರು ಪತಿಗೆ ಕರೆ ಮಾಡಿದ್ದಾರೆ. ಅಂತೆಯೇ ಕರೆ ಸ್ವೀಕರಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ರಾಕೆಟ್ ದಾಳಿಯಾಗಿದೆ. ಪರಿಣಾಮ ಭಾರೀ ಶಬ್ಧವಾಗಿ ಕರೆ ಕಟ್ ಆಗಿದೆ. ಆ ಬಳಿಕ ಎಷ್ಟು ಕಾಲ್ ಮಾಡಿದ್ರೂ ಶೀಜಾ ಕರೆ ಸ್ವೀಕರಿಸಲಿಲ್ಲ. ಇದನ್ನೂ ಓದಿ: ಕಳೆದ 14 ವರ್ಷಗಳಿಂದ ಇದ್ದು, ಭಯ ಇಲ್ಲ: ಇಸ್ರೇಲಿನಲ್ಲಿದ್ದ ಕನ್ನಡಿಗನ ಮಾತು

ಇತ್ತ ಶೀಜಾ ಕರೆ ಸ್ವೀಕರಿಸದಿದ್ದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು. ಮರುದಿನ ಕರೆಯೊಂದು ಬಂದಿದೆ. ಈ ವೇಳೆ ರಾಕೆಟ್ ದಾಳಿಯಲ್ಲಿ ಶೀಜಾ ಗಾಯಗೊಂಡಿರುವ ಬಗ್ಗೆ ತಿಳಿಯಿತು. ಅಲ್ಲದೆ ಆಕೆಗೆ ಈಗಾಗಲೇ ಒಂದು ಶಸ್ತ್ರ ಚಿಕಿತ್ಸೆ ನಡೆದಿದ್ದು, ಇನ್ನೊಂದು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಹೀಗಾಗಿ ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಬೇಕೆಂಬ ಮಾಹಿತಿ ಮಾತ್ರ ಸಿಕ್ಕಿದೆ. ಸದ್ಯ ಆಕೆಯ ಪರಿಸ್ಥಿತಿ ಹೇಗಿದೆ ಎಂಬುದು ತಿಳಿದುಬಂದಿಲ್ಲ ಅಂತ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಶೀಜಾಇಬ್ಬರು ಮಕ್ಕಳು ಭಾರತದಲ್ಲಿದ್ದಾರೆ. ಪತಿ ಪುಣೆಯಲ್ಲಿ ಕೆಲಸ ಮಾಡುತ್ತಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]