ಸಂಜಯ್‌ ಗಾಂಧಿ ಟ್ರಾಮಾ & ಅಸ್ಥಿ ಚಿಕಿತ್ಸಾ ಕೇಂದ್ರಕ್ಕೆ ಅಂಬುಲೆನ್ಸ್‌ ಉಚಿತ ಕೊಡುಗೆ – ರೋಹನ್‌ ಬೋಪಣ್ಣ ಹಸ್ತಾಂತರ

ಬೆಂಗಳೂರು: ಹೆಸರಾಂತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ (Rohan Bopanna) ಅವರು ಸಂಜಯ್‌ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರಕ್ಕೆ ಅಂಬುಲೆನ್ಸ್‌ನ್ನು ಹಸ್ತಾಂತರಿಸಿದರು.

ಹಿಟಾಚಿ ಕಂಪನಿಯು ಅಂಬುಲೆನ್ಸ್‌ನ್ನು ಉಚಿತವಾ ನೀಡಿತ್ತು. ಅತ್ಯಾಧುನಿಕ ಸೌಲಭ್ಯವುಳ್ಳ ಅಂಬುಲೆನ್ಸ್ ಇದಾಗಿದ್ದು, ಕೇಂದ್ರಕ್ಕೆ ಉಚಿತವಾಗಿ ನೀಡಲಾಯಿತು. ಇದನ್ನೂ ಓದಿ: ಕೆಎಸ್‌ಆರ್‌ಟಿಸಿಗೆ 6 ಪ್ರಶಸ್ತಿಗಳ ಗರಿಮೆ – ಕಳೆದ 8 ತಿಂಗಳಲ್ಲಿ 51 ಪ್ರಶಸ್ತಿ

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.‌ ಶರಣ್ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕರ್ನಾಟಕ ರಾಜ್ಯ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಮಹೇಶ್ವರರಾವ್, ಹಿರಿಯ ಉಪಾಧ್ಯಕ್ಷರಾದ ಎಂ.ಲಕ್ಷ್ಮೀನಾರಾಯಣ, ಎಂ.ಬಿ.ದ್ಯಾಬೇರಿ, ಸಂಜಯಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಕಾಶಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.