‘ನಿಮ್ಮದಲ್ಲ, ಇದು ನಮ್ಮ ದೇಶದ ಜಾಗʼ- ಚೀನಿ ಸೈನಿಕರನ್ನು ಓಡಿಸಿದ ಭಾರತದ ಕುರಿಗಾಹಿಗಳು

ಲಡಾಖ್‌: ಚೀನಾ ಗಡಿಯಲ್ಲಿ (China Border) ಭಾರತದ ಕುರಿಗಾಹಿಗಳು (Indian Shepherds) ಸೈನಿಕರ ರೀತಿ ಪಿಎಲ್‌ಎ ಪಡೆಗಳಿಗೆ ಎದುರೊಡ್ಡಿದ ಘಟನೆ ಲಡಾಖ್‌ನ (Ladakh) ಕಾಕ್‌ಜಂಗ್‌ನಲ್ಲಿ ನಡೆದಿದೆ.

ಭಾರತದ ಗಡಿಭಾಗದಲ್ಲಿ ಕುರಿ ಮೇಯಿಸುವುದಕ್ಕೆ ಚೀನಾ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಕುರಿಗಾಯಿಗಳು ಮಾತ್ರ, ಇದು ನಮ್ಮ ದೇಶದ ಭೂಭಾಗ ಎಂದು ವಾದ ಮಂಡಿಸಿದ್ದರು.
ಇದನ್ನೂ ಓದಿ: ಲಕ್ನೋದಿಂದ 6 ದಿನ ಕಾಲ್ನಡಿಗೆಯಲ್ಲಿ ತೆರಳಿ ರಾಮಲಲ್ಲಾಗೆ ನಮಿಸಿದ 350 ಮಂದಿ ಮುಸ್ಲಿಮರು!

ಈ ಸಂದರ್ಭದಲ್ಲಿ ಮಾತಿನ ಚಕಮಕಿ ಕೂಡ ನಡೆದಿದೆ. ಒಂದು ಹಂತದಲ್ಲಿ ಕುರಿಗಾಹಿಗಳು ಕಲ್ಲನ್ನು ಎತ್ತಿಕೊಳ್ಳಲು ನೆಲಕ್ಕೆ ಕೈ ಹಾಕಿದ್ದಾರೆ. ಈ ವೇಳೆ ಸ್ಥಳಕ್ಕೆ ಭಾರತದ ಸೈನಿಕರು ಬಂದಿದ್ದಾರೆ.

ಅದೃಷ್ಟವಶಾತ್ ಯಾವುದೇ ಘರ್ಷಣೆ ನಡೆಯಲ್ಲ. ಚೀನಿ ಸೈನಿಕರ ವಿರುದ್ಧ ಧೈರ್ಯ ತೋರಿದ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯ ಇಮಾಮ್ ವಿರುದ್ಧ ಫತ್ವಾ