ಸ್ವಾಮೀಜಿಗಳಿಗೆ ಮಣಿದು ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಸಿಬ್ಬಂದಿ ಸಮವಸ್ತ್ರ ಬದಲು

ನವದೆಹಲಿ: ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಕೇಸರಿಮಣಿಗಳ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಸಮವಸ್ತ್ರವನ್ನು ಬದಲಾಯಿಸಿದೆ.

ಈ ಬಗ್ಗೆ ಮಾತನಾಡಿದ ರೈಲ್ವೆ ಅಧಿಕಾರಿ, ಕೇಸರಿ ಸಮವಸ್ತ್ರಕ್ಕೆ ಪ್ರತಿಭಟಿಸಿದ್ದಕ್ಕೆ ಸಿಬ್ಬಂದಿಯ ಉಡುಪನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಕ್ಕೆ ಕ್ಷಮೆಯಾಚಿಸುವುದಾಗಿ ತಿಳಿಸಿದರು. ಇದನ್ನೂ ಓದಿ: 100 ರೂ. ನೋಟ್ ಒಳಗೆ ವೈಟ್ ಪೇಪರ್ ಇಟ್ಟು ವಂಚನೆ- ಐವರು ಅರೆಸ್ಟ್

ramayana express

ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ರಾಮಾಯಣ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಿಬ್ಬಂದಿ ಕೇಸರಿ ಸಮವಸ್ತ್ರ ಧರಿಸಿದ್ದಕ್ಕೆ ಸ್ಥಳೀಯರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಕೂಡಲೇ ಸಮವಸ್ತ್ರ ಹಿಂಪಡೆಯದಿದ್ದರೇ ಡಿ.12ರಂದು ರೈಲನ್ನು ದೆಹಲಿಯಲ್ಲಿ ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ramayana express

ರೈಲಲ್ಲಿ ಉಪಹಾರ ನೀಡುವ ವೇಟರ್ ಸಾಧುಗಳಂತೆ ಕೆಸರಿ ಉಡುಪು ಧರಿಸಿ ರುದ್ರಾಕ್ಷಿ ಮಾಲೆಗಳನ್ನು ಹಾಕಿಕೊಳ್ಳುವುದು ಹಿಂದೂ ಧರ್ಮ ಹಾಗೂ ಸಾಧುಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಉಜ್ಜಯಿನಿ ಅಖಾಡ ಪರಿಷತ್ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶ ಪುರಿ ಹೇಳಿದ್ದರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

ಎರಡು ದಿನಗಳ ಹಿಂದೆಯೇ ರಾಮಾಯಣ ವೇಟರ್‌ಗಳ ಸಮವಸ್ತ್ರವನ್ನು ವಿರೋಧಿಸಿ ಕೇಂದ್ರ ರೈಲ್ವೆ ಸಚಿವರಿಗೆ ಪತ್ರವನ್ನು ಬರೆಯಲಾಗಿದೆ. ಸಮವಸ್ತ್ರ ಬದಲಾವಣೆಗೊಳ್ಳದಿದರೇ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟಿಸಲಾಗುವುದು ಎಂದಿದ್ದರು.

ದೇಶದ ಮೊದಲ ರಾಮಾಯಣ ಸರ್ಕ್ಯೂಟ್ ರೈಲನ್ನು ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ನ.7ರಂದು ಪ್ರಾರಂಭಿಸಲಾಗಿದೆ. ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ 15 ಸ್ಥಳಗಳಿಗೆ ಈ ರೈಲ್ವೆ ಮೂಲಕ ಪ್ರಯಾಣಿಸಬಹುದು.

7 ಸಾವಿರಕ್ಕೂ ಹೆಚ್ಚು ಕಿಮೀ ಚಲಿಸುವ ಈ ರೈಲು ಅಯೋಧ್ಯೆ, ಪ್ರಯಾಗ್, ನಂದಿಗ್ರಾಮ, ಜನಕಪುರ, ಚಿತ್ರಕೂಟ, ಸೀತಾಮರ್ಹಿ, ನಾಸಿಕ್, ಹಂಪಿ ಮತ್ತು ರಾಮೇಶ್ವರ ಸೇರಿದಂತೆ ಇನ್ನಿತರೆ ಸ್ಥಳಗಳಿಗೆ ಕರೆದೊಯ್ಯುತ್ತದೆ. ಈ ರೈಲಿನ ಪ್ರಥಮ ದರ್ಜೆ ರೆಸ್ಟೋರೆಂಟ್, ಗ್ರಂಥಾಲಯ, ಶವರ್ ಕ್ಯೂಬಿಕಲ್‍ಗಳನ್ನು ಹೊಂದಿದೆ. ಶಿವನ ದೇಗುಲವಿರುವ ಉಜ್ಜಯಿನಿಯಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಇದನ್ನೂ ಓದಿ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ವಂಚನೆ

Comments

Leave a Reply

Your email address will not be published. Required fields are marked *