ಅಮೆರಿಕ | ಗುಜರಾತ್‌ ಮೂಲದ ಅಪ್ಪ-ಮಗಳಿಗೆ ಗುಂಡಿಕ್ಕಿ ಹತ್ಯೆ – ಶೂಟರ್‌ ಅರೆಸ್ಟ್‌

ವಾಷಿಂಗ್ಟನ್‌: ಅಮೆರಿಕದಲ್ಲಿ (USA) ನಡೆದ ಭೀಕರ ಗುಂಡಿನ ದಾಳಿಗೆ (Shoot out) ಭಾರತೀಯ ಮೂಲದ ಅಪ್ಪ ಮಗಳು ಬಲಿಯಾಗಿದ್ದಾರೆ.

24 ವರ್ಷದ ಭಾರತೀಯ ಮಹಿಳೆ ಮತ್ತು ಆಕೆಯ 56 ವರ್ಷದ ತಂದೆಯನ್ನು ಅಮೆರಿಕದ ವರ್ಜೀನಿಯಾದಲ್ಲಿ ಅವರು ಕೆಲಸ ಮಾಡುತ್ತಿದ್ದ ಅಂಗಡಿಯೊಂದರಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಕೋಮಾಕ್ ಕೌಂಟಿಯಲ್ಲಿ (Accomack County) ಅಂಗಡಿ ತೆರೆದ ಕೆಲವೇ ಸಮಯದ ಬಳಿಕ ಗುಂಡಿನ ದಾಳಿ ನಡೆದಿದೆ.

ಪ್ರದೀಪ್ ಪಟೇಲ್ (56), ಊರ್ಮಿ (24) ಹತ್ಯೆಯಾದ ತಂದೆ ಮಗಳು. ಶೂಟರ್‌ ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಬಂಧಿತ ಆರೋಪಿ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ವಾಸ್ತವ್ಯ – ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಪ್ಲ್ಯಾನ್‌

ಸ್ಥಳೀಯ ಮೂಲಗಳ ಪ್ರಕಾರ, ಆರೋಪಿ ಮದ್ಯ ಖರೀದಿಸಲು ಅಪ್ಪ-ಮಗಳಿದ್ದ ಅಂಗಡಿಗೆ ಬಂದಿದ್ದರು. ಈ ವೇಳೆ ರಾತ್ರಿ ಅಂಗಡಿ ಏಕೆ ಮುಚ್ಚಲಾಗುತ್ತು ಎಂದು ಕೇಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ಜೋರಾಗಿದ್ದು, ಆರೋಪಿ ಗುಂಡು ಹಾರಿಸಿದ್ದಾನೆ. ತಂದೆ ಪ್ರದೀಪ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗಳು ಊರ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಮಸೀದಿ ಮೇಲೆ ಉಗ್ರರಿಂದ ಗುಂಡಿನ ದಾಳಿ – 44 ಸಾವು, 13 ಮಂದಿ ಗಾಯ

ಪ್ರದೀಪ್‌ ಪಟೇಲ್‌, ಪತ್ನಿ ಹಂಸಾಬೆನ್‌, ಮಗಳು ಊರ್ಮಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರು. 6 ವರ್ಷಗಳ ಹಿಂದೆ ಅಮೆರಿಕಾಗೆ ತೆರಳಿದ್ದರು. ಪ್ರದೀಪ್‌ ತನ್ನ ಸಂಬಂಧಿ ಪರೇಶ್‌ ಪಟೇಲ್‌ ಮಾಲೀಕತ್ವದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಸದ್ಯ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಸಬ್‌ಸ್ಟೇಷನ್‌ನಲ್ಲಿ ಅಗ್ನಿ ಅನಾಹುತ – ಲಂಡನ್‌ ಹೀಥ್ರೂ ವಿಮಾನ ನಿಲ್ದಾಣ ದಿನಪೂರ್ತಿ ಬಂದ್‌