ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್‌: ಕೆಂಪು ಸಮುದ್ರದಲ್ಲಿ (Red Sea) ಯೆಮೆನ್‌ನ ಹೌತಿ ಬಂಡುಕೋರರು (Yemen’s Houthi rebels) ಭಾರತದ ಧ್ವಜವುಳ್ಳ ಕಚ್ಚಾ ತೈಲ ಟ್ಯಾಂಕರ್‌ (Indian-Flagged Oil Tanker) ಮೇಲೆ ಡ್ರೋನ್‌ ದಾಳಿ (Drone Attack) ನಡೆಸಿದ್ದಾರೆ ಎಂದು ಅಮೆರಿಕ (USA) ತಿಳಿಸಿದೆ.

ಎಂ/ವಿ ಸಾಯಿಬಾಬಾ ಹೆಸರಿನ ಗ್ಯಾಬನ್‌ ಒಡೆತನದ ಹಡಗಿನ (Ship) ಮೇಲೆ ದಾಳಿ ನಡೆಸಿದ್ದು ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದೆ. ಭಾರತೀಯ ಕಾಲಮಾನ ರಾತ್ರಿ 10:30ರ ವೇಳೆಗೆ ಈ ದಾಳಿ ಸಂಭವಿಸಿದೆ. ಭಾರತೀಯ ಹಡಗಿನ ಮೇಲೆ ದಾಳಿ ನಡೆದ ಬಳಿಕ ಮತ್ತೊಂದು ಹಡಗಿನ ಮೇಲೆ ಈ ದಾಳಿ ನಡೆದಿದೆ.

ಶನಿವಾರ ಎರಡು ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿದೆ. ನಾರ್ವೇ ಧ್ವಜದ ಹೊಂದಿದ್ದ ಹಡಗಿನ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಆದರೆ ಈ ಹಡಗು ಸ್ವಲ್ಪದರಲ್ಲೇ ಪಾರಾಗಿದೆ ಎಂದು ಅಮೆರಿಕ ತಿಳಿಸಿದೆ. ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ವ್ಯಾಪಾರಿ ಹಡಗಿನ ಮೇಲೆ ಡ್ರೋನ್‌  ದಾಳಿ

ಹೌತಿ ಬಂಡುಕೋರರಿಗೆ ಇರಾನ್ ಬೆಂಬಲ ನೀಡುತ್ತಿದೆ. ಹಮಾಸ್‌ ವಿರುದ್ಧ ಇಸ್ರೇಲ್‌ ಯುದ್ಧ ಸಾರಿದ್ದನ್ನು ಖಂಡಿಸಿ ಹೌತಿ ಬಂಡುಕೋರರು ಈಗ ಕೆಂಪು ಸಮುದ್ರದ ಮೂಲಕ ಹೋಗುವ ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದ್ದಾರೆ.

ಕೆಂಪು ಸಮುದ್ರದಲ್ಲಿ ಪದೇ ಪದೇ ದಾಳಿಯಾಗುತ್ತಿರುವ ಕಾರಣ ಪ್ರಮುಖ ಹಡಗು ಕಂಪನಿಗಳು ಮಾರ್ಗವನ್ನು ಬದಲಾಯಿಸಿದ್ದು ದಕ್ಷಿಣ ಆಫ್ರಿಕಾ ಮೂಲಕವಾಗಿ ಈಗ ಹಡಗುಗಳು ಸಂಚರಿಸುತ್ತಿವೆ.