ರಶ್ಮಿಕಾ ಮಂದಣ್ಣಗೆ ಪ್ರಪೋಸ್ ಮಾಡಿದ ಯುವ ಕ್ರಿಕೆಟಿಗ

ಬಾಲಿವುಡ್ (Bollywood) ನಟಿ ರಶ್ಮಿಕಾ ಮಂದಣ್ಣ (Rashmika Mandanna), ನ್ಯಾಷನಲ್ ಕ್ರಶ್ ಆಗಿ ಮಿಂಚ್ತಿದ್ದಾರೆ. ಅದೆಷ್ಟೋ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದಾರೆ. ದಿನದಿಂದ ದಿನಕ್ಕೆ ನಟಿಯ ಫ್ಯಾನ್ಸ್ ಬೇಸ್ ಹಿರಿದಾಗುತ್ತಲೇ ಇದೆ. ಭಾರತ ತಂಡದ ಯುವ ಆಟಗಾರ ರಶ್ಮಿಕಾ ಮಂದಣ್ಣಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಪ್ರಪೋಸಲ್ (Praposal) ಕೂಡ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: `ಶಾಕುಂತಲಂ’ ರಿಲೀಸ್‌ಗೂ ಮುನ್ನವೇ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಸಮಂತಾ

ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ಇನ್ನೂ ರಶ್ಮಿಕಾ ಹಾಟ್‌ನೆಸ್ ಮತ್ತು ಕ್ಯೂಟ್‌ನೆಸ್‌ಗೆ ಬೋಲ್ಡ್ ಆಗದವರೇ ಇಲ್ಲ. ಹೀಗಿರುವಾಗ ಯುವ ಆಟಗಾರ ಶುಭಮನ್ ಗಿಲ್ ಕೂಡ ರಶ್ಮಿಕಾಗೆ ಬೋಲ್ಡ್ ಆಗಿದ್ದಾರೆ.

ಹೌದು.. ಯುವ ಕ್ರಿಕೆಟಿಗ ಶುಭಮನ್ ಗಿಲ್ (Shubman Gill) ರಶ್ಮಿಕಾಗೆ ಮದುವೆ (Wedding) ಆಗುವ ಪ್ರಸ್ತಾವನೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ಸಂದರ್ಶನದಲ್ಲಿ ಶುಭಮನ್‌ಗೆ ನಿಮ್ಮ ಕ್ರಶ್ ಯಾರು ಎಂದು ಕೇಳಿದಾಗ, ರಶ್ಮಿಕಾ ಮಂದಣ್ಣ ನನ್ನ ಕ್ರಶ್ (Crush) ಎಂದು ನಟಿಯ ಬಗ್ಗೆ ಮಾತನಾಡಿದ್ದಾರೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ವಿಷ್ಯ ಕೇಳಿದ್ರೆ ರಶ್ಮಿಕಾ ಕೂಡ ಖುಷಿಪಡುತ್ತಾರೆ. ನಟಿಯ ರಿಯಾಕ್ಷನ್‌ಗಾಗಿ ನೆಟ್ಟಿಗರು ಕೂಡ ಎದುರು ನೋಡ್ತಿದ್ದಾರೆ.

Comments

Leave a Reply

Your email address will not be published. Required fields are marked *