ಡೈಲಾಗ್ ಹೇಳಲು ತಡವರಿಸಿದ ಪತ್ನಿಯ ಕಾಲೆಳೆದ ಧೋನಿ- ವಿಡಿಯೋ

ರಾಂಚಿ: ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಡೈಲಾಗ್ ಹೇಳಲು ತಡವರಿಸಿದ ಪತ್ನಿ ಸಾಕ್ಷಿ ಅವರ ಕಾಲೆಳೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಖಾಸಗಿ ಕಂಪನಿಯೊಂದರ ಜಾಹೀರಾತಿನಲ್ಲಿ ಎಂ.ಎಸ್.ಧೋನಿ ದಂಪತಿ ನಟಿಸುತ್ತಿದ್ದಾರೆ. ಹೀಗಾಗಿ ಚಿತ್ರೀಕರಣಕ್ಕೆ ಹೋಗಿದ್ದ ಸಾಕ್ಷಿ ಅವರು ಸ್ಕ್ರಿಪ್ಟ್ ಹಿಡಿದು ಡೈಲಾಗ್ ಓದುತ್ತಿದ್ದರು. ಈ ವೇಳೆ ಎರಡ್ಮೂರು ಪ್ರಯತ್ನಗಳ ನಂತರವೂ ಡೈಲಾಗ್ ಹೇಳ ಕಷ್ಟಪಟ್ಟರು. ಆಗ ಮಧ್ಯ ಪ್ರವೇಶಿಸಿದ ಧೋನಿ, ಸ್ಕ್ರಿಪ್ಟ್ ನೋಡಿಕೊಂಡು ನಿನಗೆ ಡೈಲಾಗ್ ಹೇಳಲು ಆಗುತ್ತಿಲ್ಲ. ಇನ್ನು ನಟನೆ ಮಾಡುತ್ತ ಹೇಗೆ ಹೇಳುತ್ತಿಯಾ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ‘ನೀವು ಯಾವಾಗಲೂ ನನ್ನ ಕ್ಯಾಪ್ಟನ್’ – ನಂಬರ್ ಒನ್ ಪಟ್ಟ ಅಲಂಕರಿಸಿತು ಕೊಹ್ಲಿಯ ಮಾತು

https://www.instagram.com/p/B6IeZOAl5CG/

ಈ ವಿಡಿಯೋವನ್ನು ಧೋನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಟನೆ ಸುಲಭದ ಕೆಲಸವಲ್ಲ ಎಂದು ಬರೆದುಕೊಂಡಿದ್ದಾರೆ. ಸಾಕ್ಷಿ ಅವರ ಈ ವಿಡಿಯೋಗೆ ಇದುವರೆಗೆ 43 ಲಕ್ಷಕ್ಕೂ ಹೆಚ್ಚು ಲೈಕ್‍ಗಳು ಬಂದಿವೆ. ಇದನ್ನೂ ಓದಿ: ಸೈನಿಕರ ರೋಚಕ ಕಥೆ ಹೇಳಲಿದ್ದಾರೆ ಧೋನಿ

2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‍ನಿಂದ ಎಂ.ಎಸ್.ಧೋನಿ ವಿರಾಮ ತೆಗೆದುಕೊಂಡಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಧೋನಿ ಅವರು ಜುಲೈ 30ರಿಂದ ಆಗಸ್ಟ್ 15 ರವರೆಗೆ ಕಾಶ್ಮೀರದಲ್ಲಿ ಪ್ಯಾರಾ ಕಮಾಂಡೋಗಳ ಬೆಟಾಲಿಯನ್‍ನಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ವೆಸ್ಟ್ ಇಂಡೀಸ್ ಪ್ರವಾಸ, ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಸರಣಿ ವೇಳೆ ತಂಡಕ್ಕೆ ಅಲಭ್ಯವಾಗಿದ್ದ ಧೋನಿ ಈ ನಡೆಯುತ್ತಿರುವ ವಿಂಡೀಸ್ ಸರಣಿಯ ಸಮಯದಲ್ಲೂ ವಿಶ್ರಾಂತಿಯಲ್ಲಿದ್ದಾರೆ.

Comments

Leave a Reply

Your email address will not be published. Required fields are marked *