ಸಿಡ್ನಿ: ಕಾರಿನಲ್ಲಿ ಡ್ರಾಪ್ ಮಾಡಿ ಹಣ ಪಡೆಯಲು ಒಪ್ಪದ ಭಾರತೀಯ ಕ್ಯಾಬ್ ಡ್ರೈವರ್ ಅನ್ನು ಪಾಕಿಸ್ತಾನಿ ಆಟಗಾರರು ತಮ್ಮ ಜೊತೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ.
ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಆಟಗಾರರು ಶಾಹೀನ್ ಶಾ ಅಫ್ರಿದಿ, ಯಾಸಿರ್ ಷಾ ಮತ್ತು ನಸೀಮ್ ಷಾ ಅವರು ಬ್ರಿಸ್ಬೇನ್‍ನಲ್ಲಿ ಊಟಕ್ಕೆ ಹೋಟೆಲ್ ಗೆ ಹೋಗಿದ್ದರು. ಆಟಗಾರರನ್ನು ಹೋಟೆಲಿಗೆ ಕರೆತಂದಿದ್ದ ಭಾರತೀಯ ಕ್ಯಾಬ್ ಚಾಲಕ ಹಣ ಪಡೆದಿರಲಿಲ್ಲ. ಹೀಗಾಗಿ ಆಟಗಾರರೆಲ್ಲರೂ ಚಾಲಕನನ್ನು ತಮ್ಮ ಜೊತೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ.
ಪಾಕಿಸ್ತಾನಿ ಕ್ರಿಕೆಟ್ ಆಟಗಾರರು ಭಾರತೀಯ ಕಾರು ಚಾಲಕನಿಗೆ ಊಟ ಕೊಡಿಸಿರುವ ಕಥೆಯನ್ನು ಟೆಸ್ಟ್ ಪಂದ್ಯದ ಕಾಮೆಂಟ್ರಿ ಮಾಡುವ ವೇಳೆ ಎಬಿಸಿ ರೇಡಿಯೊ ನಿರೂಪಕಿ ಅಲಿಸನ್ ಮಿಚೆಲ್ ಅವರು ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್‍ಗೆ ಹೇಳಿದ್ದಾರೆ. ಕ್ರಿಕೆಟ್ ಆಟಗಾರರ ಜೊತೆ ಊಟ ಮಾಡುವ ಅವಕಾಶ ಸಿಕ್ಕ ನಂತರ ಕ್ಯಾಬ್ ಚಾಲಕ ಎಷ್ಟು ಉತ್ಸುಕನಾಗಿದ್ದ ಎಂಬುದನ್ನು ಅಲಿಸನ್ ಮಿಚೆಲ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://twitter.com/abcgrandstand/status/1198442285509357570
ಈ ವಿಡಿಯೋದಲ್ಲಿ ನಿರೂಪಕಿ ಅಲಿಸನ್ ಮಿಚೆಲ್ ಅವರು ಇಂದು ನಾನು ನಿಮಗೆ ಒಂದು ಕಥೆಯನ್ನು ಹೇಳುತ್ತೇನೆ. ಆ ಮೂಲಕ ಇಂದಿನ ದಿನವನ್ನು ಆರಂಭ ಮಾಡೋಣ. ಆಗ ಮಿಚೆಲ್ ಪಾಕಿಸ್ತಾನಿ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕಾಗಿ ಬ್ರಿಸ್ಬೇನ್ ಬಂದಿದ್ದ ಪಾಕಿಸ್ತಾನಿ ಆಟಗಾರರು ಊಟಕ್ಕೆಂದು ಹೋಟೆಲ್ ಗೆ ಹೋಗಲು ಕ್ಯಾಬ್ ಬುಕ್ ಮಾಡುತ್ತಾರೆ.
ಆಗ ಅಲ್ಲಿಗೆ ಬಂದ ಕ್ಯಾಬ್ ಚಾಲಕ ಒಬ್ಬ ಭಾರತೀಯ, ಅದೂ ಅಲ್ಲದೇ ಆತ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿರುತ್ತಾನೆ. ಪಾಕಿಸ್ತಾನ ಆಟಗಾರನ್ನು ಹತ್ತಿಸಿಕೊಂಡ ಆತ ಹೋಟೆಲ್ ಗೆ ಡ್ರಾಪ್ ಮಾಡುತ್ತಾನೆ. ನಂತರ ಆಟಗಾರರು ಅವನಿಗೆ ಹಣ ಕೊಡಲು ಹೋದಾಗ ಆತ ತೆಗೆದುಕೊಳ್ಳುವುದಿಲ್ಲ. ಆಗ ಪಾಕ್ ಆಟಗಾರರು ಆತನನ್ನು ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ ಊಟ ಕೊಡಿಸಿದ್ದಾರೆ ಎಂದು ಮಿಚೆಲ್ ಜಾನ್ಸನ್‍ಗೆ ಹೇಳಿದ್ದಾರೆ.

ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಹಲವಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಭಾನುವಾರ ಬ್ರಿಸ್ಬೇನ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 5 ರನ್‍ಗಳಿಂದ ಸೋಲಿಸಿ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Leave a Reply