ವೃದ್ಧ ದಂಪತಿಗೆ ಬ್ಯಾಂಕ್ ಸಿಬ್ಬಂದಿಯಿಂದ 10 ಲಕ್ಷ ರೂ. ಮೋಸ!

– ನಕಲಿ ಸಹಿ ಮಾಡಿ ಹಣ ಡ್ರಾ ಮಾಡಿದ್ನಾ ಕ್ಯಾಶಿಯರ್?

ಬಳ್ಳಾರಿ: ಬ್ಯಾಂಕ್ ನಲ್ಲಿ ಹಣ ಇಟ್ರೆ ಫುಲ್ ಸೇಫ್ ಆಗಿರುತ್ತೆ ಅಂತಾರೆ. ಆದ್ರೆ ಬ್ಯಾಂಕ್ ನಲ್ಲಿಟ್ಟ 10 ಲಕ್ಷ ಹಣವನ್ನ ಬ್ಯಾಂಕ್ ಸಿಬ್ಬಂದಿಯೇ ಡ್ರಾ ಮಾಡಿ ವೃದ್ಧ ದಂಪತಿಗೆ ಮೋಸ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.

80 ವರ್ಷ ಇಳಿವಯಸ್ಸಿನ ಕೆಟಿ ಹನುಮಂತಪ್ಪ ಹಾಗೂ ಝಾನ್ಸಿ ಲಕ್ಷಿಭಾಯಿ ಬಳ್ಳಾರಿಯ ಇಂಡಿಯನ್ ಬ್ಯಾಂಕ್ ನಲ್ಲಿ ಕಳೆದ 25 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದಾರೆ. 2017ರ ಸಪ್ಟೆಂಬರ್ 6ರಂದು ಬ್ಯಾಂಕಿನ ತಮ್ಮ ಅಕೌಂಟಗೆ ಹತ್ತು ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದ್ದಾರೆ. ಆದ್ರೆ ಇವರು ಮಾಡಿದ ಡಿಪಾಸಿಟ್ ಹಣವನ್ನು ಬ್ಯಾಂಕ್ ಸಿಬ್ಬಂದಿಯೊಬ್ರು ನಕಲಿ ಸಹಿ ಮಾಡಿ ಸೆಪ್ಟೆಂಬರ್ 19ರಂದು ಹಣ ವಿತ್ ಡ್ರಾ ಮಾಡಿದ್ದಾರೆ ಅಂತ ವಕೀಲ ರವೀಂದ್ರ ಆರೋಪಿಸಿದ್ದಾರೆ.

ಈ ವೃದ್ಧ ದಂಪತಿ ಬ್ಯಾಂಕಿಗೆ ಹೋದಾಗೆಲ್ಲಾ ಬ್ಯಾಂಕ್ ಕ್ಯಾಶಿಯರ್ ಚಂದ್ರಪ್ಪ ಎಂಬಾತ ಇವರ ಚೆಕ್ ಬುಕ್ ಪಡೆದು ಹಣ ವಿತ್ ಡ್ರಾ ಮಾಡಿಕೊಡುತ್ತಿದ್ದರಂತೆ. ದಂಪತಿಯ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಚಂದ್ರಪ್ಪ ಚೆಕ್ ಪಡೆದು ನಕಲಿ ಸಹಿ ಮಾಡಿ ಹಣ ವಿತ್ ಮಾಡಿದ್ದಾನೆ ಅನ್ನೋದು ದಂಪತಿ ಆರೋಪವಾಗಿದೆ.

ಈಗ ಹಣಕ್ಕಾಗಿ ಬಳ್ಳಾರಿ ಎಸ್‍ಪಿ ಮೊರೆ ಹೋಗಿರುವ ವೃದ್ಧ ದಂಪತಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಮ್ಯಾನೇಜರ್ ಶಿವಕುಮಾರ್ ನನ್ನು ಕೇಳಿದ್ರೆ, ಬ್ಯಾಂಕಿನಲ್ಲಿ ಈ ರೀತಿ ಮೋಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲ, ಬ್ಯಾಂಕ್‍ನಲ್ಲಿ ಉಳಿದ ಎಫ್‍ಡಿ ಹಣ ಡ್ರಾ ಮಾಡಲು ಹೋದರೆ `ವಯಸ್ಸಾಗಿದೆ ನಮ್ಮ ಕೈ ನಡುಗುತ್ತೆ ಹೀಗಾಗಿ ಸಹಿ ವ್ಯತ್ಯಾಸವಾಗಿರಬಹುದು’ ಅನ್ನೋ ಪತ್ರಕ್ಕೆ ಸಹಿ ಕೇಳ್ತಿದ್ದಾರಂತೆ. ಇನ್ನಾದ್ರೂ ಇಳಿವಯಸ್ಸಿನ ಈ ದಂಪತಿಗೆ ಆಗ್ತಿರೋ ಮೋಸವನ್ನು ತಡೆಗಟ್ಟಲು ಪೊಲೀಸರು ಮುಂದಾಗಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *