New Year – ಪಾಕಿಸ್ತಾನ, ಚೀನಾ ಸೈನಿಕರಿಗೆ ಸಿಹಿ ಹಂಚಿ ವಿಶ್‌ ಮಾಡಿದ ಭಾರತೀಯ ಯೋಧರು

ನವದೆಹಲಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಪಡೆಯ ಯೋಧರು ಗಡಿಭಾಗಗಳಲ್ಲಿ ಪಾಕಿಸ್ತಾನ ಹಾಗೂ ಚೀನಾ ಸೈನಿಕರೊಂದಿಗೆ ಪರಸ್ಪರ ಸಿಹಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

ಪೂಂಚ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಎರಡು ದೇಶಗಳ ಯೋಧರು ಶನಿವಾರ ಪರಸ್ಪರ ಸಿಹಿ ಹಂಚಿಕೊಂಡು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ ಎಂದು ಭಾರತದ ರಕ್ಷಣಾ ವಕ್ತಾರ ಹೇಳಿದ್ದಾರೆ. ಇದನ್ನೂ ಓದಿ: NEW YEAR ಬಾಡೂಟಕ್ಕೆ ಕುರಿ ಕದ್ದ ಎಎಸ್‌ಐ!

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಹೆಚ್ಚಿಸುವ ಪ್ರಯತ್ನ ಇದಾಗಿದೆ ಎಂದು ಭಾರತ ಹೇಳಿದೆ.

ಹೊಸ ವರ್ಷದ ಆರಂಭದಲ್ಲಿ ಪರಸ್ಪರ ನಂಬಿಕೆ ಮತ್ತು ಶಾಂತಿಯನ್ನು ಉತ್ತೇಜಿಸಲು ಭಾರತೀಯ ಸೇನೆಯು ಪೂಂಚ್‌ ಮತ್ತು ಮೆಂಧರ್‌ ಕ್ರಾಸಿಂಗ್‌ ಪಾಯಿಂಟ್‌ ಬಳಿ ಪಾಕಿಸ್ತಾನದ ಸೇನೆಯೊಂದಿಗೆ ಸಿಹಿ ಹಂಚಿ ವಿಶ್‌ ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ಕಳೆದ ವರ್ಷದ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಕೆಲವು ಉಲ್ಲಂಘನೆಗಳನ್ನು ಹೊರತುಪಡಿಸಿದರೆ, ಈ ಒಪ್ಪಂದ ಗಡಿ ನಿವಾಸಿಗಳು ಮತ್ತು ರೈತರಿಗೆ ಯುದ್ಧ ಭೀತಿಯಿಂದ ರಿಲೀಫ್‌ ಸಿಕ್ಕಿದೆ. ಇದನ್ನೂ ಓದಿ: ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

ಅಷ್ಟೇ ಅಲ್ಲದೇ ಭಾರತೀಯ ಸೇನೆಯು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಜೊತೆಗೆ ಹಾಟ್ ಸ್ಪ್ರಿಂಗ್ಸ್, ಡೆಮ್‌ಚೋಕ್, ನಾಥುಲಾ ಮತ್ತು ಕೊಂಗ್ರಾ ಲಾ ಪ್ರದೇಶಗಳಲ್ಲಿ ವಾಸ್ತವಿಕ ನಿಯಂತ್ರಣ ಗಡಿ ರೇಖೆ ಭಾಗದಲ್ಲಿ ಸಿಹಿ ವಿನಿಮಯ ಮಾಡಿಕೊಂಡಿತು.

Comments

Leave a Reply

Your email address will not be published. Required fields are marked *