ಕೇವಲ 40 ದಿನದಲ್ಲೇ ಭಾರತೀಯ ಸೇನೆಯಿಂದ ನಿರ್ಮಾಣವಾಯ್ತು 260 ಅಡಿ ಉದ್ದದ ಸೇತುವೆ!

ಶ್ರೀನಗರ: ಸಿಂಧೂ ನದಿಯ ಲೆಹ್‍ನಲ್ಲಿ ಉದ್ದವಾದ ಕೇಬಲ್ ಸೇತುವೆ ನಿರ್ಮಾಣವನ್ನು ಕೇವಲ 40 ದಿನಗಳಲ್ಲಿ ಭಾರತೀಯ ಸೇನೆಯು ಪೂರ್ಣಗೊಳಿಸುವ ಮೂಲಕ ನೂತನ ದಾಖಲೆಯನ್ನು ನಿರ್ಮಿಸಿದೆ.

ಈ ಕೇಬಲ್ ಸೇತುವೆ ಬರೋಬ್ಬರಿ 260 ಅಡಿ ಉದ್ದವಿದ್ದು, ಇದನ್ನು ‘ಮೈತ್ರಿ ಸೇತುವೆ’ ಎಂದು ಕರೆಯಲಾಗಿದೆ. ಭಾರತೀಯ ಸೈನ್ಯದ ಫೈರ್ ಮತ್ತು ಫ್ಯೂರಿ ಕಾರ್ಪ್ಸ್ ‘ ನ ಸಹಸ್ ಔರ್ ಯೋಗ್ಯತಾ ರೆಜಿಮೆಂಟ್ ಯುದ್ಧ ಎಂಜಿನಿಯರ್ ಗಳು ಇದನ್ನು ನಿರ್ಮಿಸಿದ್ದಾರೆ.

ಈ ಸೇತುವೆ ನಿರ್ಮಾಣಕ್ಕಾಗಿ 500 ಟನ್‍ಗಳಷ್ಟು ನಿರ್ಮಾಣ ಸಾಮಾಗ್ರಿಗಳನ್ನು ಬಳಕೆ ಮಾಡಲಾಗಿದೆ. ಇದು ಭಾರತೀಯ ಯೋಧರಿಂದ ನಿರ್ಮಾಣವಾಗಿರುವ ವೈಯಕ್ತಿಕ ದಾಖಲೆಯಾಗಿದೆ.

ಈ ಸೇತುವೆಯನ್ನು 1947-48, 1962, 1971 ಮತ್ತು 1999 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆಗಳ ಭಾಗವಾಗಿದ್ದ ಯುದ್ಧ ಯೋಧರು ಉದ್ಘಾಟಿಸಿದ್ದರು. ಈ ಸೇತುವೆ ಲೆಹ್ ಮತ್ತು ಲಡಾಖ್ ಜೊತೆಗೆ ಇದು ಚೋಗ್ಲಾಮ್ಸರ್, ಸ್ಟೋಕ್ ಮತ್ತು ಚುಚೋಟ್ನ ದೂರದ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

ಭಾರತೀಯ ಯೋಧರ ಈ ದಾಖಲೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಕಡಿಮೆ ದಿನಗಳಲ್ಲಿ ಸೇತುವೆಯನ್ನು ತ್ವರಿತವಾಗಿ ನಿರ್ಮಾಣ ಮಾಡಿರುವುದಕ್ಕಾಗಿ ಸ್ಥಳೀಯರು ಕೂಡ ಶಬ್ಬಾಸ್ ಗಿರಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *