ಭಾರತೀಯ ಸೇನೆಯಿಂದ ಕಾಶ್ಮೀರಿ ಶಾಲೆಗಳಿಗೆ 25 ಬೆಂಚ್ ಡೆಸ್ಕ್, ಕಂಪ್ಯೂಟರ್, ವಾಟರ್ ಟ್ಯಾಂಕ್ ಪೂರೈಕೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸರ್ಕಾರಿ ಅಡಿಯಲ್ಲಿರುವ ಶಾಲೆಗಳಿಗೆ ಸದ್ಭಾವನಾ ಕಾರ್ಯಚರಣೆಯ ಮೂಲಕ ಭಾರತೀಯ ಸೇನೆಯೂ ಶಾಲೆಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಿದೆ.

ಜಮ್ಮು-ಕಾಶ್ಮೀರದ ಸಾಂಬಾ ಸೆಕ್ಟರ್ ನಲ್ಲಿರುವ ಬಾರಿಖಾದಿ ಪ್ರಾಂತ್ಯದ ಸರ್ಕಾರಿ ಶಾಲೆಯನ್ನು ಭಾರತೀಯ ಸೇನೆ ಸದ್ಭಾವನಾ ಕಾರ್ಯಚರಣೆಯ ಮೂಲಕ ಜೀರ್ಣೋದ್ಧಾರ ಮಾಡಿದೆ. ಯೋಧರು ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ಮಾತನಾಡಿಸಿ, ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಮುಸ್ಲಿಂರಿಂದ ಶಿವನ ದೇಗುಲ ಜೀರ್ಣೋದ್ಧಾರ!

ಪಾಕಿಸ್ತಾನದ ದಾಳಿ ಮತ್ತು ಉಗ್ರರ ಹಾವಳಿಯಿಂದಾಗಿ ಗಡಿಭಾಗದ ಶಾಲೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರೆ ಮುಂದೆ ನಿಂತು ಶಾಲೆಯ ಪುನಾರಂಭ ಮಾಡಿದ್ದಾರೆ.

ಸೇನೆಯೂ ಸರ್ಕಾರಿ ಶಾಲೆಗೆ, ಒಂದು ವಾಟರ್ ಟ್ಯಾಂಕ್, ಕೂಲರ್ ಸಹಿತ ಒಂದು ಶುದ್ಧ ಕುಡಿಯುವ ನೀರಿನ ಯಂತ್ರ, 25 ಬೆಂಚ್ ಡೆಸ್ಕ್ ಗಳು, ನಾಲ್ಕು ಕಂಪ್ಯೂಟರ್ ಗಳು ಮತ್ತು ಅದರ ಪರಿಕರಗಳು ಹಾಗೂ ಕಟ್ಟಡ ಎಲ್ಲವರನ್ನು ಆಪರೇಷನ್ ಸಧ್ಬಾವನಾ ಅಡಿಯಲ್ಲಿ ಒದಗಿಸಿದೆ.

ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಭಾರತೀಯ ಸೈನ್ಯವು ‘ಆಪರೇಷನ್ ಸಧ್ಭಾವನಾ’ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇದರ ಅಡಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ತರಬೇತಿಯಂತಹ ಕಾರ್ಯಕ್ರಮವನ್ನು ಸಹ ಸೇನೆಯಲ್ಲಿರುವ ಯೋಧರು ಆಯೋಜನೆ ಮಾಡುತ್ತಾರೆ. ಸೇನೆಯ ಈ ಕಾರ್ಯಕ್ಕೆ ಸ್ಥಳೀಯರು ಕೂಡ ಖುಷಿ ಪಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *