ಲೆಫ್ಟಿನೆಂಟ್ ಜನರಲ್‍ಗೆ ಸೆಲ್ಯೂಟ್ ಮಾಡಿದ ನಾಯಿ- ಫೋಟೋ ವೈರಲ್

ನವದೆಹಲಿ: 15 ಕಾರ್ಪ್ಸ್ ನ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಅವರಿಗೆ ಸೇನಾ ನಾಯಿಯೊಂದು ಸೆಲ್ಯೂಟ್ ಮಾಡಿದ್ದು, ಫೋಟೋ ವೈರಲ್ ಆಗಿದೆ.

ಫೋಟೋದಲ್ಲಿ ನಾಯಿ ಸೆಲ್ಯೂಟ್ ಮಾಡಿದ್ದಕ್ಕೆ ಚಿನಾರ್ ಕಾರ್ಪ್ಸ್ ಕಮಾಂಡರ್ ಮರಳಿ ಸೆಲ್ಯೂಟ್ ಮಾಡಿದ್ದನ್ನು ಕಾಣಬಹುದಾಗಿದೆ. ಫೋಟೋದ ಕುರಿತು ಸೇನೆಯ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದು, ಅಮರನಾಥ ಯಾತ್ರೆಯ ಮೊದಲ ದಿನದಂದು ಅಂದರೆ ಜುಲೈ 1ರಂದು ಕ್ಲಿಕ್ಕಿಸಿಕೊಂಡ ಚಿತ್ರವಿದು ಎಂದು ಮಾಹಿತಿ ನೀಡಿದ್ದಾರೆ.

ಅಮರನಾಥನ ದರ್ಶನಕ್ಕಾಗಿ ಕಮಾಂಡರ್ ಗುಹೆಗೆ ತೆರಳುವ ಸಂದರ್ಭದಲ್ಲಿ ಗುಹೆಯಿಂದ ಸುಮಾರು 50 ಮೀಟರ್ ಹಿಂದೆ ಈ ನಾಯಿ ಸೆಲ್ಯೂಟ್ ಮಾಡಿದೆ. ಮೇನಕಾ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿತ್ತು. ಆಗ ಸ್ಥಳಕ್ಕೆ ಸೇನೆಯ ಕಮಾಂಡರ್ ತೆರಳಿದ್ದು, ನಾಯಿ ಅವರಿಗೆ ಸೆಲ್ಯೂಟ್ ಮಾಡಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆಯ ಸಂಸ್ಕೃತಿ ಪ್ರಕಾರ ಎಲ್ಲ ಹಿರಿಯ ಅಧಿಕಾರಿಗಳು ಪರಸ್ಪರ ಸೆಲ್ಯೂಟ್ ವಿನಿಮಯ ಮಾಡಿಕೊಳ್ಳುತ್ತಾರೆ. ಹೀಗಾಗಿ ಲೆಫ್ಟಿನೆಂಟ್ ಜನರಲ್ ಧಿಲ್ಲೋನ್ ಅವರು ನಾಯಿಗೆ ಮರಳಿ ಸೆಲ್ಯೂಟ್ ಮಾಡಿದ್ದಾರೆ.

ಈ ಫೋಟೋವನ್ನು @enn gee ess ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಈ ಚಿತ್ರವು ಹಲವು ಕಥೆಗಳನ್ನು ಹೇಳುತ್ತದೆ. ಆರ್‍ವಿಸಿ ದಿನ ನಂಬಿಕಸ್ತ ಹಾಗೂ ನಿಸ್ವಾರ್ಥ ಬಡ್ಡಿಗೊಂಡು ಸೆಲ್ಯೂಟ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಲೆಫ್ಟಿನೆಂಟ್ ಜನರಲ್ ಧಿಲ್ಲೋನ್ ಅವರು ರೀಟ್ವೀಟ್ ಮಾಡಿ, ಅನೇಕ ಬಾರಿ ಅನೇಕ ಜೀವಗಳನ್ನು ಉಳಿಸಿದ ಬಡ್ಡಿಗೊಂದು ಸೆಲ್ಯೂಟ್ ಎಂಬ ಸಾಲುಗಳನ್ನು ಬರೆದಿದ್ದಾರೆ.

ಸೈನಿಕರ ಕಾರ್ಯಾಚರಣೆ ಸಂದರ್ಭದಲ್ಲಿ ಸೇನೆಯ ನಾಯಿಗಳೂ ಕಾರ್ಯಾಚರಣೆಗೆ ಇಳಿದು ಭಯೋತ್ಪಾದಕರನ್ನು ಹಾಗೂ ಸ್ಫೋಟಕಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಭಯೋತ್ಪಾದನೆ ಕಾರ್ಯಾಚರಣೆ ವೇಳೆ ತಮ್ಮ ಪಾತ್ರವನ್ನು ವಹಿಸಿದ್ದಕ್ಕಾಗಿ ಸೇನೆಯ ಅನೇಕ ನಾಯಿಗಳಿಗೆ ವೀರ ಪದಕವನ್ನು ನೀಡಲಾಗಿದೆ. ಅಲ್ಲದೆ ಹೆಸರಗತ್ತೆಗಳು ಹಾಗೂ ಕುದುರೆಗಳು ಸಹ ಕಷ್ಟಕರ ಪ್ರದೇಶ ಹಾಗೂ ವಾತಾವರಣದಲ್ಲಿ ಸೈನಿಕರು ಕಾರ್ಯನಿರ್ವಹಿಸಲು ಸೇನೆಗೆ ಸಹಾಯ ಮಾಡುತ್ತವೆ.

Comments

Leave a Reply

Your email address will not be published. Required fields are marked *