Google ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರ

ವಾಷಿಂಗ್ಟನ್: ವ್ಯಾಪಾರ ಮತ್ತು ಕೈಗಾರಿಕಾ ವಿಭಾಗದಲ್ಲಿ ಗೂಗಲ್ ಹಾಗೂ ಆಲ್ಫಾಬೆಟ್ ಸಿಇಒ (Google CEO) ಆಗಿರುವ ಸುಂದರ್ ಪಿಚೈ (Sundar Pichai) ಅವರಿಗೆ ಭಾರತ ಸರ್ಕಾರ (Government Of India) ಪದ್ಮಭೂಷಣ ಪ್ರಶಸ್ತಿ (Padma Bhushan Award) ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ಪಿಚೈ ಅವರಿಗೆ ಭಾರತದ ಅಮೆರಿಕ ರಾಯಭಾರಿ ಹಸ್ತಾಂತರಿಸಿದ್ದಾರೆ.

ಅಮೆರಿಕ-ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು (Taranjit Singh Sandhu) ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪಿಚೈ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿ ಹಸ್ತಾಂತರಿಸಿದರು. ತಮಿಳುನಾಡಿನ ಮದುರೈ ಮೂಲದ ಪಿಚೈ ಈ ವರ್ಷಾರಂಭದಲ್ಲಿ 17 ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದರು. ಇದನ್ನೂ ಓದಿ: ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಬಳಸುವಂತಿಲ್ಲ – ಮದ್ರಾಸ್ ಹೈಕೋರ್ಟ್ ಆದೇಶ

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪಿಚೈ, ಈ ಅಪಾರ ಗೌರವಕ್ಕಾಗಿ ನಾನು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶದಿಂದಲೇ ಈ ರೀತಿ ಗೌರವಿಸಲ್ಪಟ್ಟಿರುವುದು ನಂಬಲು ಸಾಧ್ಯವೇ ಆಗುತ್ತಿಲ್ಲ. ಭಾರತ ದೇಶ ಎಂದಿಗೂ ನನ್ನ ಭಾಗವಾಗಿರುತ್ತದೆ. ನಾನು ಎಲ್ಲಿಗೇ ಹೋದರೂ ಭಾರತವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ ಎಂದು ಕೊಂಡಾಡಿದರು. ಇದನ್ನೂ ಓದಿ: ನನ್ನ ಹತ್ಯೆಗೆ ಸ್ಕೆಚ್ – ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಗಂಭೀರ ಆರೋಪ

ನನ್ನ ಆಸಕ್ತಿಗಳನ್ನು ಅನ್ವೇಷಿಸಲು ನನ್ನ ಕುಟುಂಬ ಬಹಳಷ್ಟು ತ್ಯಾಗ ಮಾಡಿದೆ. ನನ್ನ ಪೋಷಕರು ಕಲಿಕೆಗೆ ಸಹಕರಿಸಿದ್ದಾರೆ. ಅಂತಹ ಕುಟುಂಬದಲ್ಲಿ ನಾನು ಬೆಳೆಯಲು ಅದೃಷ್ಟಶಾಲಿಯಾಗಿದ್ದೇನೆ ಎಂದು ಸ್ಮರಿಸಿದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *