Asian Championship Trophy Hockey final: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ; ಮಲೇಷ್ಯಾ ವಿರುದ್ಧ 4-3 ಅಂತರದ ರೋಚಕ ಜಯ

ಚೆನ್ನೈ: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ-2023 ಫೈನಲ್‌ (Asian Champions Trophy Final Hockey) ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ (India vs Malaysia) ರೋಚಕ ಜಯ ಸಾಧಿಸಿದೆ. ಆ ಮೂಲಕ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯನ್ನು ಭಾರತ ತನ್ನದಾಗಿಸಿಕೊಂಡಿದೆ.

ಚೆನ್ನೈನಲ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ 4-3 ಅಂತರದಲ್ಲಿ ಮಲೇಷ್ಯಾ ವಿರುದ್ಧ ವಿರೋಚಿತ ಜಯ ಗಳಿಸಿತು. ಆ ಮೂಲಕ ACT ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದನ್ನೂ ಓದಿ: Asian Champions Trophy Hockey 2023: 4-0 ಗೋಲುಗಳ ಅಂತರದಲ್ಲಿ ಪಾಕ್‌ ಮಣಿಸಿದ ಭಾರತ

ರಣರೋಚಕ ಆಟದಲ್ಲಿ ಮೊದಲ ಕ್ವಾರ್ಟರ್‌ನಲ್ಲಿ ಭಾರತದ ಜುಗರಾಜ್ ಸಿಂಗ್ ಗೋಲು ಗಳಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ ಮಲೇಷ್ಯಾದ ಕಮಲ್ ಅಬು ಅರ್ಜೈ 1-1 ರಿಂದ ಸಮಬಲ ಸಾಧಿಸಿದರು. ನಂತರ ಎರಡನೇ ಕ್ವಾರ್ಟರ್‌ನಲ್ಲಿ ರಾಝೀ ರಹೀಮ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಮಲೇಷ್ಯಾಗೆ 2-1 ಗೋಲು ಗಳಿಸಿದರು. ಅಮಿನುದ್ದೀನ್ ಮುಹಮ್ಮದ್ ಎರಡನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ 3-1 ಗೋಲು ಗಳಿಸಿದರು.

ಈ ವೇಳೆ ಭಾರತ ಮತ್ತೆ ಪುಟಿದೆದ್ದಿತು. ಮೂರನೇ ಕ್ವಾರ್ಟರ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಅನ್ನು 2-3 ಗೆ ಪರಿವರ್ತಿಸಿದರು. ನಂತರ ಗುರ್ಜಂತ್ 3-3 ಮೂಲಕ ಸಮಬಲಕ್ಕೆ ತಂದರು. ಕೊನೆಯದಾಗಿ ಆಕಾಶದೀಪ್ ಗೋಲ್‌ ನೀಡುವ ಮೂಲಕ ACT ಪ್ರಶಸ್ತಿಯನ್ನು ಭಾರತ ಮುಡಿಗೇರಿಸಿಕೊಳ್ಳಲು ಸಹಾಯ ಮಾಡಿದರು. ಇದನ್ನೂ ಓದಿ: ಜಸ್ಟ್ 1 ಪೋಸ್ಟ್‌ಗೆ 11.45 ಕೋಟಿ ರೂ. – ಕೊಹ್ಲಿ ಖಡಕ್‌ ರಿಯಾಕ್ಷನ್‌

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]