ICC Ranking: ದೈತ್ಯ ಆಸೀಸ್‌ ಹಿಂದಿಕ್ಕಿ ಮತ್ತೆ ನಂ.1 ಪಟ್ಟಕ್ಕೇರಿದ ಭಾರತ

– ಕ್ರಿಕೆಟ್‌ ಲೋಕದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

ಮುಂಬೈ: ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅಮೋಘ ಜಯ ಸಾಧಿಸಿದ ಬಳಿಕ ಭಾರತ, ದೈತ್ಯ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್‌ ರ‍್ಯಾಕಿಂಗ್‌ನಲ್ಲಿ (ICC Test Ranking) ಮತ್ತೊಮ್ಮೆ ನಂ.1 ಪಟ್ಟವನ್ನು ಕಸಿದುಕೊಂಡಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ವಿಶೇಷ ಪೋಸ್ಟರ್‌ ಹಂಚಿಕೊಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿ ಡ್ರಾನಲ್ಲಿ ಅಂತ್ಯಗೊಂಡ ಬಳಿಕ ಭಾರತ ಐಸಿಸಿ ಟೆಸ್ಟ್‌ ರ‍್ಯಾಕಿಂಗ್‌ನಲ್ಲಿ ನಂ.1 ಸ್ಥಾನ ಕಳೆದುಕೊಂಡಿತ್ತು. ಆಗ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಟೀಂ ಇಂಡಿಯಾದ ಕನಸನ್ನು ಭಗ್ನಗೊಳಿಸಿದ್ದ ಆಸ್ಟ್ರೇಲಿಯಾ (Australia) ತಂಡ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದುಕೊಂಡಿತ್ತು. 2 ತಿಂಗಳ ನಂತರ ಭಾರತ ಮತ್ತೆ ಅಗ್ರಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದನ್ನೂ ಓದಿ:  WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್‌ ನಾಯಕತ್ವಕ್ಕೆ ಮೆಚ್ಚುಗೆ

ಅಲ್ಲದೇ 6 ತಿಂಗಳ ಬಳಿಕ ಟೆಸ್ಟ್‌, ಏಕದಿನ ಹಾಗೂ T20 ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅಗ್ರಸ್ಥಾನಕ್ಕೇರಿದ್ದು ಇತಿಹಾಸ ಬರೆದಿದೆ. 2023ರ ಏಕದಿನ ವಿಶ್ವಕಪ್‌ಗೂ (ODI World Cup) ಮುನ್ನ ಭಾರತ ಈ ವೀಶೇಷ ಸಾಧನೆ ಮಾಡಿತ್ತು. ಇದೀಗ ಮತ್ತೊಮ್ಮೆ ಮೂರು ಮಾದರಿಗಳಲ್ಲಿ ನಂ.1 ಸ್ಥಾನ ತನ್ನದಾಗಿಸಿಕೊಂಡಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 122 ರೇಟಿಂಗ್ಸ್‌, ಏಕದಿನ ಕ್ರಿಕೆಟ್‌ನಲ್ಲಿ 121 ರೇಟಿಂಗ್ಸ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ 266 ರೇಟಿಂಗ್ಸ್‌ನೊಂದಿಗೆ ಅಗ್ರಸ್ಥಾನಕ್ಕೇರಿದೆ. ಜೊತೆಗೆ 68.51 ಪಿಸಿಟಿಯೊಂದಿಗೆ (Percentage Of Points Earned) ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲೂ ಅಗ್ರಸ್ಥಾನ ಉಳಿಸಿಕೊಂಡಿದೆ. ಇದನ್ನೂ ಓದಿ: RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್‌

ಟೆಸ್ಟ್‌ ರ‍್ಯಾಂಕಿಂಗ್‌ನ ಟಾಪ್‌-5 ತಂಡಗಳು
ಭಾರತ – 122 ರೇಟಿಂಗ್ಸ್‌
ಆಸ್ಟ್ರೇಲಿಯಾ – 120 ರೇಟಿಂಗ್ಸ್‌
ಇಂಗ್ಲೆಂಡ್‌ – 111 ರೇಟಿಂಗ್ಸ್‌
ದಕ್ಷಿಣ ಆಫ್ರಿಕಾ – 99 ರೇಟಿಂಗ್ಸ್‌
ನ್ಯೂಜಿಲೆಂಡ್‌ – 98 ರೇಟಿಂಗ್ಸ್‌

ಏಕದಿನ ರ‍್ಯಾಂಕಿಂಗ್‌ನ ಟಾಪ್‌-5 ತಂಡಗಳು
ಭಾರತ – 121 ರೇಟಿಂಗ್ಸ್‌
ಆಸ್ಟ್ರೇಲಿಯಾ – 118 ರೇಟಿಂಗ್ಸ್‌
ದಕ್ಷಿಣ ಆಫ್ರಿಕಾ – 110 ರೇಟಿಂಗ್ಸ್‌
ಪಾಕಿಸ್ತಾನ – 109 ರೇಟಿಂಗ್ಸ್‌
ನ್ಯೂಜಿಲೆಂಡ್‌ – 102 ರೇಟಿಂಗ್ಸ್‌

ಟಿ20 ರ‍್ಯಾಂಕಿಂಗ್‌ನ ಟಾಪ್‌-5 ತಂಡಗಳು
ಭಾರತ – 266 ರೇಟಿಂಗ್ಸ್‌
ಇಂಗ್ಲೆಂಡ್‌ – 256 ರೇಟಿಂಗ್ಸ್‌
ಆಸ್ಟ್ರೇಲಿಯಾ – 255 ರೇಟಿಂಗ್ಸ್‌
ನ್ಯೂಜಿಲೆಂಡ್‌ – 254 ರೇಟಿಂಗ್ಸ್‌
ಪಾಕಿಸ್ತಾನ – 249 ರೇಟಿಂಗ್ಸ್‌