ಅಭಿಮಾನಿಯ ಟ್ವೀಟ್ ರಿಟ್ವೀಟ್ ಮಾಡಿ ಸೆಹ್ವಾಗ್ ಕಾಲೆಳೆದ ಜಡೇಜಾ

ಬೆಂಗಳೂರು: ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ತನ್ನ ಬಗ್ಗೆ ವಿರೇಂದ್ರ ಸೆಹ್ವಾಗ್ ಬಳಿ ಕೇಳಿಕೊಂಡ ಪ್ರಶ್ನೆಯನ್ನು ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ರಿಟ್ವೀಟ್ ಮಾಡಿದ್ದಾರೆ.

ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 203 ರನ್ ಗಳಿಂದ ಪಂದ್ಯವನ್ನು ಗೆದ್ದ ಹಿನ್ನೆಲೆಯಲ್ಲಿ ಸೆಹ್ವಾಗ್ ಟೀಂ ಇಂಡಿಯಾವನ್ನು ಟ್ವಿಟ್ಟರ್ ನಲ್ಲಿ ಅಭಿನಂದಿಸಿದ್ದರು.

ರೋಹಿತ್ ಶರ್ಮಾ ಉತ್ತಮವಾಗಿ ಆಡಿದ್ದೀರಿ. ಮಯಾಂಕ್, ಶಮಿ, ಅಶ್ವಿನ್, ಪುಜಾರಾ ಅವರ ಸಂಘಟಿತ ಆಟದಿಂದ ಭಾರತ ಜಯಗಳಿಸಿದೆ ಎಂದು ಬರೆದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಗಮನಿಸಿದ ಬಿನೀತ್ ಪಟೇಲ್ ಎಂಬವರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರೂ ಯಾಕೆ ಅವರ ಹೆಸರನ್ನು ಉಲ್ಲೇಖ ಮಾಡಿಲ್ಲ ಎಂದು ಪ್ರಶ್ನಿಸಿದ್ದರು.

ಬಿನೀತ್ ಪಟೇಲ್ ಟ್ವೀಟ್ ನಲ್ಲಿ ಟ್ಯಾಗ್ ಆಗಿದ್ದ ಕಾರಣ ರವೀಂದ್ರ ಜಡೇಜಾ ಅವರು ಈ ಟ್ವೀಟ್ ರಿಟ್ವೀಟ್ ಮಾಡಿ ಸೆಹ್ವಾಗ್ ಕಾಲೆಳೆದಿದ್ದಾರೆ. ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಔಟಾಗದೇ 30 ರನ್ (46 ಎಸೆತ, 1 ಸಿಕ್ಸರ್) ಹೊಡೆದಿದ್ದ ಜಡೇಜಾ ಎರಡನೇ ಇನ್ನಿಂಗ್ಸ್ ನಲ್ಲಿ 40 ರನ್(32 ಎಸೆತ, 3 ಸಿಕ್ಸರ್) ಹೊಡೆದಿದ್ದರು.

ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಕಿತ್ತಿದ್ದ ಜಡೇಜಾ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರು.

Comments

Leave a Reply

Your email address will not be published. Required fields are marked *