ಟಿ20 ವರ್ಲ್ಡ್ ಕಪ್ – ಅಕ್ಟೋಬರ್ 24ರಂದು ಭಾರತ Vs ಪಾಕಿಸ್ತಾನ

– 5 ವರ್ಷದ ಬಳಿಕ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ

ನವದೆಹಲಿ: ಐದು ವರ್ಷದ ನಂತರ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿದ್ದು, ಅಕ್ಟೋಬರ್ 24 ರಂದು ಪಂದ್ಯ ನಡೆಯಲಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟಿ20 ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

2007ರಲ್ಲಿ ಟಿ20 ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾ ಅಕ್ಟೋಬರ್ 24ರಂದು ತನ್ನ ಮೊದಲ ಪಂದ್ಯ ಆಡಲಿದೆ. ಮೊದಲ ಪಂದ್ಯವನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಆಡಲಿದೆ. ಟೂರ್ನಿಮೆಂಟ್ ಮೊದಲ ಪಂದ್ಯ ಅಕ್ಟೋಬರ್ 17ರಂದು ಒಮನ್ ಮತ್ತು ಪಾಪುವಾ ನ್ಯೂ ಗಿನಿ ನಡುವೆ ನಡೆಯಲಿದೆ. ನವೆಂಬರ್ 14ರಂದು ಫೈನಲ್ ಮ್ಯಾಚ್ ನಡೆಯಲಿದೆ.

8 ಪಂದ್ಯಗಳಲ್ಲಿ 7 ಗೆಲುವು:
ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಪಂದ್ಯ 2016ರಲ್ಲಿ ಆಡಲಾಗಿತ್ತು. ಎರಡೂ ತಂಡಗಳು ಟಿ20 ವರ್ಲ್ಡ್ ಕಪ್ ನಲ್ಲಿ ಐದು ಬಾರಿ ಮುಖಾಮುಖಿಯಾಗಿದ್ದು, ಎಲ್ಲ ಪಂದ್ಯಗಳಲ್ಲಿಯೂ ಪಾಕಿಸ್ತಾನವನ್ನ ಸೋಲಿಸಿ ಭಾರತ ಜಯಶಾಲಿಯಾಗಿ ಹೊರ ಹೊಮ್ಮಿದೆ.

ಎಲ್ಲ ಟಿ20 ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಒಟ್ಟು ಎಂಟು ಬಾರಿ ಸೆಣಸಾಡಿವೆ. ಇವುಗಳಲ್ಲಿ ಏಳು ಬಾರಿ ಭಾರತ ಗೆದ್ದಿದ್ರೆ, ಒಮ್ಮೆ ಮಾತ್ರ ಪಾಕಿಸ್ತಾನ ಗೆಲುವು ಕಂಡಿತ್ತು. 2007ರ ಟಿ20 ವಿಶ್ವಕಪ್‍ನಲ್ಲಿ ಪಂದ್ಯ ಟೈ ಆಗಿತ್ತು. ಹೀಗಾಗಿ ಬಾಲ್ ಔಟ್ ಮೂಲಕ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗಿತ್ತು. ಬಾಲ್ ಔಟ್‍ನಲ್ಲಿ ಭಾರತ ಗೆದ್ದುಕೊಂಡಿತ್ತು. ಇದನ್ನೂ ಓದಿ: ಪಂತ್, ಇಶಾಂತ್ ಮೇಲೆ ಕೋಪಗೊಂಡ ಕೊಹ್ಲಿ: ವೀಡಿಯೋ ವೈರಲ್

ಕೆಲ ದಿನಗಳ ಹಿಂದೆ ಐಸಿಸಿ ಟೀಂ ಗ್ರೂಪ್ ಗಳನ್ನು ಅನೌನ್ಸ್ ಮಾಡಿತ್ತು. ಓಮನ್ ನಲ್ಲಿ ಆಡುವ ರೌಂಡ್ ನಲ್ಲಿ ಎಂಟು ತಂಡಗಳು ಸೂಪರ್-12ರಲ್ಲಿ ಸ್ಥಾನ ಕಾಯ್ದಿರಿಸಿಕೊಳ್ಳಲು ಆಡಲಿವೆ. ಈ ಟೀಂನಲ್ಲಿ 2014ರ ಟಿ20 ವಿನ್ನರ್ ಶ್ರೀಲಂಕಾ ಸೇರಿದಂತೆ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದಂತೆ ಬಲಿಷ್ಠ ರಾಷ್ಟ್ರಗಳಿವೆ. ಇದನ್ನೂ ಓದಿ: ಡಿಆರ್‌ಎಸ್‌ ಎಡವಟ್ಟು – ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸಿರಾಜ್

ಒಟ್ಟು 45 ಪಂದ್ಯಗಳು:
ಈ ಬಾರಿಯ ಟಿ20 ವರ್ಲ್ಡ್ ಕಪ್ ಪಂದ್ಯಗಳು ಅಕ್ಟೋಬರ್ 17ರಿಂದ ನವೆಂಬರ್ 14 ರವರೆಗೆ ನಡೆಯಲಿವೆ. ಅರ್ಹತಾ ಸುತ್ತು ಸೇರಿದಂತೆ ಒಟ್ಟು 45 ಮ್ಯಾಚ್ ಗಳು ನಡೆಯಲಿವೆ. ಇದರಲ್ಲಿ ಅರ್ಹತಾ ಸುತ್ತಿನಲ್ಲಿ 12, ಸೂಪರ್-12ರಲ್ಲಿ 30 ಪಂದ್ಯಗಳು ನಡೆಯಲಿವೆ. ಇವುಗಳ ಜೊತೆ ಸೆಮಿಫೈನಲ್ ಮತ್ತು ಫೈನಲ್ ಸಹ ಪಂದ್ಯಗಳಿವೆ. ಇದನ್ನೂ ಓದಿ: ಸಿರಾಜ್ ದಾಳಿಗೆ ನಲುಗಿದ ಇಂಗ್ಲೆಂಡ್- ಭಾರತಕ್ಕೆ ಭರ್ಜರಿ ಜಯ

Comments

Leave a Reply

Your email address will not be published. Required fields are marked *