ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಭರ್ಜರಿ ಬೆಟ್ಟಿಂಗ್- ಹತ್ತು ಜನ ಅರೆಸ್ಟ್

ಬೆಂಗಳೂರು: ಭಾರತ-ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಭರ್ಜರಿ ಬೆಟ್ಟಿಂಗ್ ನಡೆಸಿದ್ದ ಹತ್ತು ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ನವೀನ್, ಲಕ್ಷ್ಮಣ್ ದಾಸ್, ಚೇತನ್, ವೈಭವ್, ನಿತಿನ್, ಮಹಮ್ಮದ್ ಫಹಾದ್, ಪ್ರತೀಕ್, ಪವನ್, ಕಿಶನ್ ಮತ್ತು ಅರವಿಂದ್ ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ 87 ಸಾವಿರ ರೂ. ನಗದು ಸೇರಿದಂತೆ ಹತ್ತು ಮೊಬೈಲ್, ಬೆಟ್ಟಿಂಗ್‍ಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.  ಇದನ್ನೂ ಓದಿ: ಶೈನಿ, ಶಾರ್ದೂಲ್, ರಾಹುಲ್, ಪಾಂಡೆ ಕಮಾಲ್- ಸೂಪರ್ ಓವರಿನಲ್ಲಿ ಮತ್ತೆ ಭಾರತಕ್ಕೆ ಜಯ

ನ್ಯೂಜಿಲೆಂಡ್‍ನಲ್ಲಿ ನಡೆಯುತ್ತಿರುವ ಟಿ20 ಸರಣಿಯ ನಾಲ್ಕೂ ಪಂದ್ಯಕ್ಕೂ ಭರ್ಜರಿ ಬೆಟ್ಟಿಂಗ್ ನಡೆದಿತ್ತು. ಅದರಲ್ಲೂ ಶುಕ್ರವಾರ ನಡೆಯುತ್ತಿದ್ದ ಸರಣಿಯ ನಾಲ್ಕನೇ ಪಂದ್ಯಕ್ಕೆ ಭಾರೀ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, ನಗರದ ಹೈ ಫೈ ಏರಿಯಾ ಅಂತ ಕರೆಸಿಕೊಳ್ಳುವ ಲ್ಯಾವೆಲ್ಲಿ ರಸ್ತೆಯ ಪ್ರತಿಷ್ಠಿತ ಕ್ಲಬ್‍ವೊಂದರ ಮೇಲೆ ದಾಳಿ ನಡೆಸಿದ್ದರು. ಇದನ್ನೂ ಓದಿ: ಶಾರ್ದೂಲ್ ನೀಡಿದ ಬಾಲನ್ನು ವಿಕೆಟ್‍ಗೆ ಎಸೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ಕೊಹ್ಲಿ: ವಿಡಿಯೋ

ಭಾರತ-ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವು ಟೈ ಆಗಿ ಸೂಪರ್ ಓವರ್ ನಡೆದಿತ್ತು. ಈ ವೇಳೆ ಲಕ್ಷಾಂತರ ರೂ. ಬೆಟ್ಟಿಂಗ್ ನಡೆಸುತ್ತಿದ್ದ ಹತ್ತು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *