‘ಬೌಲರ್ ಹೆಸರೇಳಿ’- ಸಂಜಯ್ ಮಂಜ್ರೇಕರ್​ರನ್ನ ಅಣಕಿಸಿದ ರವೀಂದ್ರ ಜಡೇಜಾ

-ಜಡೇಜಾ ಟ್ವೀಟ್‍ಗೆ ಸಂಜಯ್ ಪ್ರತಿಕ್ರಿಯೆ

ಆಕ್ಲೆಂಡ್: ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಜರ್ ನಡುವೆ ವಾಕ್ ಯುದ್ಧ ನಡೆದಿತ್ತು. ಅಂದು ಜಡೇಜಾರಂತಹ ‘ಬಿಟ್ಸ್ ಅಂಡ್ ಪೀಸಸ್’ ಆಟಗಾರನಿಗೆ ನಾನು ಅಭಿಮಾನಿಯಲ್ಲ. ಜಡೇಜಾ ಟೆಸ್ಟ್ ಏಕದಿನ ಮಾದರಿ ಸಿಮೀತ ಓವರ್ ಗಳ ಕ್ರಿಕೆಟ್‍ಗೆ ಫಿಟ್ ಅಲ್ಲ. ಆತ ಟೆಸ್ಟ್ ಕ್ರಿಕೆಟ್ ಮಾತ್ರ ಅಗತ್ಯ ಎಂದು ವ್ಯಾಖ್ಯಾನಿಸಿದ್ದರು.

 

ಮಂಜ್ರೇಕರ್ ಅವರ ಈ ಕಾಮೆಂಟ್‍ಗಳಿಗೆ ತಿರುಗೇಟು ನೀಡಿದ್ದ ಜಡೇಜಾ, ತನ್ನ ಸ್ಥಾನ ಯಾವುದು ಎಂದು ತಿಳಿದುಕೊಂಡು ಮಾತನಾಡಿ. ನಿಮಗಿಂತ ಹೆಚ್ಚು ಪಂದ್ಯಗಳನ್ನು ದೇಶದ ಪರ ಆಡಿದ್ದೇನೆ ಎಂದಿದ್ದರು. ಇಂದಿಗೂ ರವೀಂದ್ರ ಜಡೇಜಾ, ಮಂಜ್ರೇಕರ್ ಅವರ ಮಾತುಗಳನ್ನು ಮರೆತಿಲ್ಲ.

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೆಎಲ್ ರಾಹುಲ್ ಅವರಿಗೆ ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಮಂಜ್ರೇಕರ್ ಅವರು, ಈ ಪಂದ್ಯದಲ್ಲಿ ಬೌಲರ್ ಗಳಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿರುತ್ತಿತ್ತು ಎಂದಿದ್ದರು. ಮಂಜ್ರೇಕರ್ ಅವರ ಅಭಿಪ್ರಾಯಕ್ಕೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದ ಜಡೇಜಾ, ಆ ಬೌಲರ್ ಹೆಸರನ್ನು ಹೇಳಿ ಎಂದು ಅಣಕಿಸಿದ್ದರು.

ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ಓವರ್ ಗಳಲ್ಲಿ 18 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದಿದ್ದರು. ಬೌಲರ್ ಗಳ ಪ್ರದರ್ಶನವನ್ನು ಪರಿಗಣಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ದರೆ ಜಡೇಜಾ ಅವರಿಗೆ ಲಭಿಸುತ್ತಿತ್ತು. ಜಡೇಜಾ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಮಂಜ್ರೇಕರ್ ಅವರು, ನಿನಗೆ ಅಥವಾ ಬುಮ್ರಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬಹುದಿತ್ತು. ಬುಮ್ರಾಗೆ ಏಕೆ ಎಂದರೇ, ಆತ ಮಾಡಿದ 3, 10, 18 ಮತ್ತು 20 ಓವರ್ ಗಳ ಎಕಾನಮಿ ತುಂಬಾ ಉತ್ತಮವಾಗಿದೆ ಎಂದು ತಮ್ಮ ಸಮರ್ಥನೆಯನ್ನು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *